janadhvani

Kannada Online News Paper

ಸಮಸ್ತ ಉಪಾಧ್ಯಕ್ಷರಾದ ತಾಜುಶ್ಶರೀಅಃ ಅಲೀ ಕುಂಞಿ ಉಸ್ತಾದ್ ವಫಾತ್

ಕಾಸರಗೋಡು| ಸಮಸ್ತ ಕೇರಳ ಜಮ್ಇಯ್ಯತುಲ್ ಉಲಾಮಾ ಉಪಾಧ್ಯಕ್ಷರೂ, ಸೂಫಿ ವರ್ಯರೂ ಆಗಿರುವ ಆಶಿಖುರ್ರಸೂಲ್ ಶೈಖುನಾ ಎಂ.ಅಲೀಕುಂಞಿ ಮುಸ್ಲಿಯಾರ್ ಶಿರಿಯಾ(86) ವಫಾತ್ ಆದರು.

ಅಪಾರ ವಿದ್ವಾಂಸರನ್ನು ಸಮೂಹಕ್ಕೆ ಸಮರ್ಪಿಸಿದ ಉಸ್ತಾದುಲ್ ಅಸಾತೀದರನ್ನು ವಿದ್ವತ್ ಜಗತ್ತು ತಾಜುಶ್ಶರೀಅಃ ಎಂದು ಕರೆಯುತ್ತಿತ್ತು. ಹಲವಾರು ಮೊಹಲ್ಲಾಗಳ ಖಾಝಿಯಾಗಿರುವ ಶೈಖುನಾ ಅವರು ಹಲವು ವರ್ಷಗಳಿಂದ ಕಾಸರಗೋಡು ಜಿಲ್ಲೆಯ ಪೊಯ್ಯತ್ತಬೈಲ್ ಜಮಾಅತ್ತಿನಲ್ಲಿ ಧಾರ್ಮಿಕ ಸೇವೆಗೈಯ್ಯುತ್ತಿದ್ದರು.ಶಿರಿಯಾ ಲತ್ವೀಫಿಯ್ಯಾದ ಅಧ್ಯಕ್ಷರಾಗಿದ್ದ ಶೈಖುನಾ ಅವರು ತಮ್ಮ 30 ನೇ ವಯಸ್ಸಿನಲ್ಲಿ ಸಮಸ್ತ ಕೇಂದ್ರ ಮುಷಾವರ ಸದಸ್ಯರಾದರು.

ಅಲಿಕುಂಞಿ ಉಸ್ತಾದ್ ಅವರು ಮಾರ್ಚ್ 4, 1935 ರಂದು ಅಬ್ದುರ್ರಹ್ಮಾನ್ ಹಾಜಿ ಮತ್ತು ಮರಿಯಮ್ ದಂಪತಿಯ ಮಗನಾಗಿ ಕಾಸರ್‌ಗೋಡ್ ತಾಲ್ಲೂಕಿನ ಶಿರಿಯಾ ಬಳಿಯ ವಲಯಂನಲ್ಲಿ ಜನಿಸಿದರು. ಹಳೆಯ ಓತುಪಳ್ಳಿಯಲ್ಲಿ ಅಧ್ಯಯನ ಪ್ರಾರಂಭವಾಯಿತು. ಮೊದಲ ಗುರು ಮೂಸ ಮುಕ್ರಿ, ಅವರು ಮುಟ್ಟಂಮ್ ಜುಮಾ ಮಸೀದಿಯ ಮುಅದ್ಝಿನ್ ಆಗಿದ್ದರು. ಐದನೇ ತರಗತಿಯವರೆಗೆ ಶಾಲಾ ಶಿಕ್ಷಣ ಕನ್ನಡ ಮಾಧ್ಯಮದಲ್ಲಿತ್ತು. ಶಾಲೆಯ ಶಿಕ್ಷಕರೂ ಮೂಸ ಮುಕ್ರಿಯವರೇ ಆಗಿದ್ದರು.

ದರ್ಸ್ ವಿದ್ಯಾಭ್ಯಾಸವು ವಲಯಂ ಮುಹ್ಯುದ್ದೀನ್ ಮುಸ್ಲಿಯಾರ್ ಅವರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಸೂಫಿ ವಿದ್ವಾಂಸರಾದ ಎಡಕ್ಕಾಡ್ ಕುಂಞಹ್ಮದ್ ಮುಸ್ಲಿಯಾರ್ ಅವರೊಂದಿಗೆ ಎರಡು ವರ್ಷಗಳ ಕಾಲ ಅಧ್ಯಯನ ಮಾಡಿದರು. ಅಲ್ ಬಯಾನ್ ಪತ್ರಿಕೆಯ ಸಂಪಾದಕ ಮತ್ತು ಸಮಸ್ತ ಮುಷವಾರ ಸದಸ್ಯರಾದ ಕಾಡೇರಿ ಅಬ್ದುಲ್ ಕಲಾಂ ಮುಸ್ಲಿಯಾರ್ ಅವರೊಂದಿಗೆ ಪರಪ್ಪನಂಗಡಿಯಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು.

1952 ರಲ್ಲಿ, ಪೈವಳಿಕೆ ಮುಹಮ್ಮದ್ ಹಾಜಿ ಮುಸ್ಲಿಯರ್ ಅವರ ಪೊಸೊಟ್ ಜುಮಾ ಮಸೀದಿ ದರ್ಸ್. ಮುಂದಿನ ವರ್ಷ ಉನ್ನತ ವ್ಯಾಸಂಗಕ್ಕಾಗಿ ತಳಿಪರಂಬ್ ಖುವ್ವತುಲ್ ಇಸ್ಲಾಂ ಅರೇಬಿಕ್ ಕಾಲೇಜಿಗೆ ಹೋದರು.ಶಂಸುಲ್ ಉಲಮಾ ಇ.ಕೆ. ಅಬೂಬಕರ್ ಮುಸ್ಲಿಯಾರ್ ಆಗಿದ್ದರು ಅಲ್ಲಿನ ಮುದರ್ರಿಸ್.ಇ.ಕೆ.ಹಸನ್ ಮುಸ್ಲಿಯಾರ್ ಮತ್ತು ಸಿ.ಎಂ.ವಲಿಯುಲ್ಲಾಹಿ ಅವರು ಅಲೀ ಕುಂಞಿ ಉಸ್ತಾದರಿಗೆ ಕಿತಾಬ್ ಕಲಿಸುತ್ತಿದ್ದರು.

ನಂತರ, ಮನೆಯ ಸಮೀಪ ಖತೀಬ್ ಆಗಿ ಸೇವೆ ಸಲ್ಲಿಸುತ್ತಿರುವಾಗ, ಸಮೀಪವಿರುವ ಮುಹಮ್ಮದಾಜಿ ಉಸ್ತಾದರ ದರ್ಸ್ ನಲ್ಲಿ ಅಧ್ಯಯನ ಮಾಡಿದರು. ನೆಲ್ಲಿಕುನ್ನಿನಲ್ಲೂ ದರ್ಸ್ ವ್ಯಾಸಂಗಮಾಡಿರುವ ಅವರು, ಖತೀಬ್ ಸೇವೆಯನ್ನು ತ್ಯಜಿಸಿ ಪರಪ್ಪನಂಗಡಿಯಲ್ಲಿರುವ ಕೋಟ್ಟುಮಲ ಅಬೂಬಕರ್ ಮುಸ್ಲಿಯಾರ್‌ ಅವರ ದರ್ಸ್‌ಗೆ ಸೇರಿದರು.ಏಳು ವರ್ಷಗಳ ಕಾಲ ಇಲ್ಲಿ ಅಧ್ಯಯನ ನಡೆಸಿ,1962 ರಲ್ಲಿ ದಿಯೋಬಂದ್ ದಾರುಲ್ ಉಲೂಮ್ನಲ್ಲಿ ಅಧ್ಯಯನ ಮಾಡಿದರು. ಕತ್ವೀಬುಲ್ ಹಿಂದ್ ಖಾರಿಅ್ ಮುಹಮ್ಮದ್ ತಯ್ಯಿಬ್ ಆಗಿದ್ದರು ಅಲ್ಲಿನ ಮುಖ್ಯ ಗುರು. ದೌರತುಲ್-ಹದೀಸ್ ಕುರಿತಾಗಿತ್ತು ಅಧ್ಯಯನ.

ನಂತರ ಕಾಸರಗೋಡು ಜಿಲ್ಲೆಯ ಕುಂಬೋಲ್‌ನಲ್ಲಿ ಶೈಖುನಾರವರು ತಮ್ಮ ಮೊದಲ ದರ್ಸ್ ರಂಗಕ್ಕೆ ಕಾಲಿರಿಸಿದರು.

error: Content is protected !! Not allowed copy content from janadhvani.com