janadhvani

Kannada Online News Paper

ಕೆ.ಸಿ.ಎಫ್. ದೋಹಾ ಝೋನ್ ವಾರ್ಷಿಕ ಮಹಾಸಭೆ

ದೋಹಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಖತ್ತರ್ ಅಧೀನದಲ್ಲಿರುವ, ಕೆ.ಸಿ.ಎಫ್.ದೋಹಾ ಝೋನ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 26-03-2021 ಶುಕ್ರವಾರ ಅಪರಾಹ್ನ 1 ಗಂಟೆಗೆ ಸರಿಯಾಗಿ ಝೂಮ್ ಆ್ಯಪ್ ಮೂಲಕ ದೋಹಾ ಝೋನ್ ಅಧ್ಯಕ್ಷರಾದ ಯಹ್ಯಾ ಸಅದಿ ಯವರ ಅಧ್ಯಕ್ಷತೆಯಲ್ಲಿ ಜರಗಿತು.


ಸಭೆಯನ್ನು ಕೆ.ಸಿ.ಎಫ್. ಖತ್ತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಂಗೇರಿ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಕೆ.ಸಿ.ಎಫ್.ಸಂಘಟನೆಯು ಯಾವ ಮಟ್ಟಕ್ಕೆ ಬೆಳೆದಿದೆ ಎಂಬೂದರ ಬಗ್ಗೆ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಅಧ್ಯಕ್ಷ ಭಾಷಣ ಮಾಡಿದ ಯಹ್ಯಾ ಸಅದಿ, ಕೆ.ಸಿ.ಎಫ್ ದೋಹಾ ಝೋನ್ ಕಾರ್ಯವೈಖರಿಯ ಬಗ್ಗೆ ಮಾತನಾಡುತ್ತಾ, ಕೆ.ಸಿ.ಎಫ್.ಸಂಘಟನೆಯ ಅಗತ್ಯತೆಯ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಮುಖ್ಯ ಪ್ರಭಾಷಕಾರರಾಗಿ ಪಾಲ್ಗೊಂಡಿದ್ದ ಕೆ.ಸಿ.ಎಫ್.ಅಂತಾರಾಷ್ಟ್ರೀಯ ‌ಸಮಿತಿ‌ ಸದಸ್ಯರಾದ ಹಾಫಿಳ್ ಫಾರೂಕ್ ಸಖಾಫಿ ಎಮ್ಮೆಮ್ಮಾಡು ರವರು ಸಂಘಟನೆಯ ಮಹತ್ವ, ಅದರ ಕಾರ್ಯಚಟುವಟಿಕೆ ರೀತಿ ಹಾಗೂ ಸಂಘಟನೆಯಲ್ಲಿ ಭಾಗಿಯಾದ ಸದಸ್ಯರಿಗೆ ಲಭಿಸುವ ಧಾರ್ಮಿಕ – ಸಾಮಾಜಿಕ ಜ್ಙಾನ ಹಾಗೂ ಮಾನಸಿಕವಾಗಿ ದೊರಕುವ ಅನ್ಯೋನ್ಯತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಇದೇ ವೇಳೆಯಲ್ಲಿ ಅವರು ಇಸ್ಲಾಂ ಚರಿತ್ರೆಯ ಪವಿತ್ರ ತಿಂಗಳಲ್ಲೊಂದಾದ ಶ’ಅಬಾನ್ ನ ಪಾವಿತ್ರ್ಯತೆಯ ಬಗ್ಗೆಯೂ ಪಾಲ್ಗೊಂಡಿದ್ದ ಸದಸ್ಯರಲ್ಲಿ ಹಂಚಿಕೊಂಡರು.

2019-21 ನೇ ಸಾಲಿನ ವರದಿ ಹಾಗೂ ಲೆಕ್ಕ ಪತ್ರವನ್ನು ಝೋನ್ ಪ್ರಧಾನ ಕಾರ್ಯದರ್ಶಿ ಹಾಶಿರ್ ಕೆ.ಸಿ.ರೋಡ್ ಮಂಡಿಸಿದರು. ಕೆ.ಸಿ.ಎಫ್. ಖತ್ತರ್ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಮಿರ್ಷಾದ್ ಕನ್ಯಾನರವರ ನೇತೃತ್ವದಲ್ಲಿ ಹಾಲಿ ಸಮಿತಿಯಲ್ಲಿ ಖಾಲಿಯಿದ್ದ ಸ್ಥಾನಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿ ಇಹ್ಸಾನ್ ವಿಭಾಗದ ಕಾರ್ಯದರ್ಶಿ ರಹೀಂ ಸಅದಿ ಪಾಣೆಮಂಗಳೂರು, ಖತ್ತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಹಂಡುಗುಳಿ ಹಾಗೂ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಸತ್ತಾರ್ ಅಶ್ರಫಿ ಮಠ ನೂತನ ಸಮಿತಿಗೆ ಶುಭಾಶಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಇಹ್ಸಾನ್ ಚೆರ್ಮಾನ್ ಮುನೀರ್ ಮಾಗುಂಡಿ, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಕಬೀರ್ ದೇರಳಕಟ್ಟೆ ರವರು ಉಪಸ್ಥಿತಿಯಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಹಾಫಿಳ್ ಫಾರೂಕ್ ಸಖಾಫಿ ಯವರು ದುಆ ನೆರವೇರಿಸಿದರೆ, ಹಾಶಿರ್ ಕೆ.ಸಿ.ರೋಡ್ ಸ್ವಾಗತ ಮಾಡಿದರು. ಕೊನೆಯಲ್ಲಿ ದೋಹಾ ಝೋನ್ ಶಿಕ್ಷಣ ವಿಭಾಗ ಕಾರ್ಯದರ್ಶಿ ಸದಕತುಲ್ಲಾ ಕುಳೂರು ರವರು ವಂದಿಸಿದರು.
ಖತ್ತರ್ ‌ರಾಷ್ಟೀಯ ಸಮಿತಿ ಆಡಳಿತ ವಿಭಾಗದ ಅಧ್ಯಕ್ಷ ಫಾರೂಖ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.

ಕೆ.ಸಿ.ಎಫ್ ದೋಹಾ ಝೋನ್ 2021-22 ನೇ ಸಾಲಿನ ನೂತನ ಸಮಿತಿ ಈ ಕೆಳಗಿನಂತಿವೆ.
ಅಧ್ಯಕ್ಷರು: ಯಹ್ಯಾ ಸಅದಿ ಕಡಂಗ
ಪ್ರ.ಕಾರ್ಯದರ್ಶಿ: ಹಾಷಿರ್ ಕೆ.ಸಿ.ರೋಡ್
ಕೋಶಾಧಿಕಾರಿ: ರಿಝ್ವಾನ್ ಸಾಗರ

ಸಂಘಟನಾ ವಿಭಾಗ :
ಅಧ್ಯಕ್ಷ – ಖಲೀಲ್ ಉರುಮಣೆ
ಕಾರ್ಯದರ್ಶಿ – ಹಸೈನಾರ್ ಕಾಟಿಪಳ್ಳ

ಶಿಕ್ಷಣ ವಿಭಾಗ:
ಅಧ್ಯಕ್ಷ – ಮೊಯ್ದೀನ್ ಸಿದ್ದಾಪುರ
ಕಾರ್ಯದರ್ಶಿ – ಸದಕತುಲ್ಲಾ ಕೂಳೂರು

ಇಹ್ಸಾನ್ ವಿಭಾಗ :
ಅಧ್ಯಕ್ಷ – ನಿಯಾಝ್ ಕೂರ್ನಾಡು
ಕಾರ್ಯದರ್ಶಿ -ಜಾಫರ್ ಕೆ.ಸಿ.ರೋಡ್

ಸಾಂತ್ವನ ವಿಭಾಗ:
ಅಧ್ಯಕ್ಷ – ಜಲೀಲ್ ರೆಂಜಾಡಿ
ಕಾರ್ಯದರ್ಶಿ – ಝುಬೈರ್ ತುರ್ಕಳಿಕೆ

ಪ್ರಕಾಶನ ವಿಭಾಗ:
ಅಧ್ಯಕ್ಷ – ಅಬ್ದುಲ್ ಹಕೀಂ ಪಾತೂರು
ಕಾರ್ಯದರ್ಶಿ – ತಾಜುದ್ದೀನ್ ಮೆಲ್ಕಾರ್.

ಆಡಳಿತ ವಿಭಾಗ :
ಅಧ್ಯಕ್ಷ – ಅಬೂಬಕ್ಕರ್ ಪೂತ್ತೂರು
ಕಾರ್ಯದರ್ಶಿ – ಫಾರೂಕ್ ಜೆಪ್ಪು

ಕಾರ್ಯಕಾರಿ ಸಮಿತಿ ಸದಸ್ಯರು:
ಹನೀಫ್ ಕಲ್ಪಡ
ಮುಸ್ತಫಾ ಕೃಷ್ಣಾಪುರ
ಅಕ್ಬರ್ ದೇರಳಕಟ್ಟೆ
ಅಲ್ತಾಫ್ ಬೋಂದೆಲ್
ಜಾಬಿರ್ ಆತೂರು
ಉಮರ್ ಮದನಿ ಪಾತೂರು
ಜಮಾಲ್ ಸಾಂಬಾರ್’ತೋಟ
ದಾವೂದ್ ದೇರಳಕಟ್ಟೆ

error: Content is protected !! Not allowed copy content from janadhvani.com