janadhvani

Kannada Online News Paper

ಡಿಜಿಟಲ್ ಪೇರೆಂಟಿಂಗ್ ಉಚಿತ ತರಬೇತಿ 3ನೇ ಬ್ಯಾಚ್ ಪ್ರವೇಶಾತಿ ಪ್ರಾರಂಭ

ಇನ್ ಲೈಟ್ ಕುತ್ತಾರಿನಲ್ಲಿ ಎರಡು ತಿಂಗಳುಗಳ ಕಾಲ ನಡೆಯುವ “ಡಿಜಿಟಲ್ ಪೇರೆಂಟಿಂಗ್” ಉಚಿತ ತರಬೇತಿ ಇತ್ತೀಚೆಗೆ ಪ್ರಾರಂಭವಾಯಿತು ಮಂಗಳೂರು ಇನ್ ಲೈಟ್ ಲೈಫ್ ಸ್ಕಿಲ್ ಟ್ರೈನಿಂಗ್ ಸಂಸ್ಥೆಯ ಸಂಸ್ಥಾಪಕರು ಚೈಲ್ಡ್ ರೆಮೀಡಿಯೇಟರ್ ಆದ ಖಲೀಲ್ ಇಬ್ರಾಹಿಂ ತರಬೇತಿ ನೀಡಿದರು. ಇನ್ ಲೈಟ್ ಸಂಸ್ಥೆಯ ವ್ಯವಸ್ಥಾಪಕರಾದ ಮಹಮ್ಮದ್ ಇರ್ಫಾನ್ ಮಾತನಾಡಿ ಇನ್ ಲೈಟ್ ಸಂಸ್ಥೆಯು ಸಮಾಜದ ಒಳಿತಿಗಾಗಿ ಹಲವಾರು ಉಚಿತ ಶಿಬಿರಗಳನ್ನು ನಡೆಸುತ್ತಾ ಬರುತ್ತಿದೆ.
ಕೌಟುಂಬಿಕ ಸಮಸ್ಯೆ,ಮಾನಸಿಕ ತೊಂದರೆ, ಕಲಿಕೆಯಲ್ಲಿನ ಸಮಸ್ಯೆ , ಜೀವನದಲ್ಲಿ ಜಿಗುಪ್ಸೆ, ಕೆಲಸದ ಟೆಂಕ್ಸನ್, ಮಕ್ಕಳ ಹಟಮಾರಿತನ ಹೀಗೆ…ಒಂದಲ್ಲ….ಎರಡಲ್ಲ… ನೂರಾರು ಸಮಸ್ಯೆ ಗಳಿಗೆ ಅತ್ಯಂತ ಸರಳ ಮತ್ತು ಸುಲಭ ಪರಿಹಾರ ಇನ್ ಲೈಟ್ ಮೂಲಕ ಖಲೀಲ್ ಸಾರ್ ರವರು ನೀಡುತ್ತಾರೆ. ಜೀವನದಲ್ಲಿ ಹತಾಶೆ ಗೊಂಡು ಜೀವನ ಬೇಡವೆಂದು ನಿರಾಶೆ ಅನುಭವಿಸಿದವರಿಗೆ ಇನ್ ಲೈಟ್ ಹೊಸ ಜಗತ್ತಿನ ಭರವಸೆಯ ಬೆಳಕನ್ನು ನೀಡುತ್ತದೆ.

ಡಿಜಿಟಲ್ ಪೇರೆಂಟಿಂಗ್ ಮುಂದಿನ ತರಬೇತಿಯು 2021 ಎಪ್ರಿಲ್ ತಿಂಗಳಲ್ಲಿ ಉಳ್ಳಾಲ ಮತ್ತು ಕುತ್ತಾರಿನಲ್ಲಿ ಪ್ರಾರಂಭವಾಗಲಿದ್ದು ಉಚಿತ ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರನ್ನು ನೋಂದಾಯಿಸಬಹುದು.
ಇನ್ ಲೈಟ್ ಲೈಫ್ ಸ್ಕಿಲ್ ಟ್ರೈನಿಂಗ್ ಸೆಂಟರ್ ಕುತ್ತಾರು,ಮಂಗಳೂರು
8884338955
ಉಳ್ಳಾಲ 7022476645

error: Content is protected !! Not allowed copy content from janadhvani.com