ಮುಜಾಫರ್‍ನಗರ,ಮಾ.29:-ಮಸೀದಿಯೊಂದರ ಪಿಲ್ಲರ್ ಕುಸಿದು ಬಿದ್ದು ಎರಡು ಮಕ್ಕಳು ಸ್ಥಳದಲ್ಲೇ ಮೃತಪಟ್ಟು ಒಂದು ಮಗು ತೀವ್ರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಶಾಮ್ಲೀ ಜಿಲ್ಲೆಯಲ್ಲಿ ನಡೆದಿದೆ. ಮಸೀದಿಯಲ್ಲಿ ಆಯೋಜಿಸಿದ್ದ ಶಬ್ ಏ ಬರಾಅತ್ ಕಾರ್ಯಕ್ರಮದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಮಕ್ಕಳು 10 ರಿಂದ 12 ವರ್ಷದೊಳಗಿನವರಾದ ಖುರ್ಷಿದ್ ಮತ್ತು ಮತ್ಲೂಬ್ ಎಂದು ಗುರುತಿಸಲಾಗಿದೆ.
ಅವಘಡದಲ್ಲಿ ಸಮೀರ್ ಎಂಬ ಬಾಲಕ ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬರಾಅತ್ ಸಂದರ್ಭದಲ್ಲಿ ಮಸೀದಿಯಲ್ಲಿ ನೂರಾರು ಮಂದಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಏಕಾಏಕಿ ಕಟ್ಟಡದ ಪಿಲ್ಲರ್ ಕುಸಿದು ಘಟನೆ ಸಂಭವಿಸಿದೆ.