ರಿಯಾದ್ |ಸೌದಿ ಅರೇಬಿಯಾ ಉಮ್ರಾ ನಿರ್ವಹಿಸುವವರ ವಯಸ್ಸಿನ ಮಿತಿಗೆ ವಿನಾಯಿತಿ ನೀಡಲಾಗಿದೆ. 18 ರಿಂದ 70 ವರ್ಷದೊಳಗಿನ ದೇಶೀಯ ಯಾತ್ರಾರ್ಥಿಗಳಿಗೆ ಉಮ್ರಾ ತೀರ್ಥಯಾತ್ರೆ ಮಾಡಲು ಸಚಿವಾಲಯ ಅನುಮತಿ ನೀಡಿದೆ. ತೀರ್ಥಯಾತ್ರೆಗಾಗಿ ಮೊಬೈಲ್ ಅಪ್ಲಿಕೇಷನ್ ಮೂಲಕ ಅನುಮತಿ ಪಡೆದವರಿಗೆ ಮಾತ್ರ ಉಮ್ರಾ ನಿರ್ವಹಿಸಲು ಅವಕಾಶವಿರುತ್ತದೆ.
ಹಜ್ ಮತ್ತು ಉಮ್ರಾ ಸಚಿವಾಲಯವು ವಯಸ್ಸಿನ ಮಿತಿಗೆ ವಿನಾಯಿತಿ ನೀಡಿದ್ದು,ಕೋವಿಡ್ನಿಂದ ಕಠಿಣ ನಿಯಂತ್ರಣಗಳಿಗೆ ಒಳಪಟ್ಟಿರುವ ವೃದ್ಧರಿಗೆ ಉಮ್ರಾ ನಿರ್ವಹಿಸುವ ಅವಕಾಶಗಳನ್ನು ಒದಗಿಸುವ ಪ್ರಯತ್ನದ ಒಂದು ಭಾಗವಾಗಿದೆ.
ಸಚಿವಾಲಯದ ಇಅ್ ತಮರ್ನಾ ಮೊಬೈಲ್ ಆ್ಯಪ್ ಮೂಲಕ ಪೂರ್ವಾನುಮತಿ ಪಡೆಯುವವರಿಗೆ ಅವಕಾಶ ನೀಡಲಾಗುವುದು. ಒಬ್ಬ ವ್ಯಕ್ತಿಗೆ ತಿಂಗಳಿಗೆ ಗರಿಷ್ಠ ಎರಡು ಬಾರಿ ಉಮ್ರಾ ನಿರ್ವಹಿಸಲು ಅವಕಾಶವಿದೆ.
ರಂಜಾನ್ ತಿಂಗಳ ಆಗಮನ ವೇಳೆಗೆ ಉಮ್ರಾ ಬುಕಿಂಗ್ ಕೂಡ ಹೆಚ್ಚಾಗಿದೆ. ಪ್ರಸ್ತುತ ಈ ತಿಂಗಳ ಅಂತ್ಯದವರೆಗೆ ಮೊಬೈಲ್ ಅಪ್ಲಿಕೇಶನ್ ಮೂಲಕ ಅನುಮತಿ ನೀಡಲಾಗಿದೆ.