ರಿಯಾದ್: ಸೌದಿ ಅರೇಬಿಯಾದಲ್ಲಿ ಕೋವಿಡ್ ಲಸಿಕೆ ಪಡೆದವರಿಗೆ ನೀಡಲಾಗುವ ಹೆಲ್ತ್ ಪಾಸ್‌ಪೋರ್ಟ್‌ಗಳು ಅಂತರರಾಷ್ಟ್ರೀಯ ಪ್ರಯಾಣಕ್ಕೆ ಕಡ್ಡಾಯವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿದಿನವೂ ರೋಗಿಗಳ ಸಂಖ್ಯೆಯಲ್ಲಿನ ಗಣನೀಯ ಇಳಿಕೆ ಮತ್ತು ಮರಣ ಪ್ರಮಾಣಡಾ ಇಳಿಕೆಯು ಜನರೆಡೆಯಲ್ಲಿ ಆಶಾಭಾವನೆಯನ್ನು ಮೂಡಿಸಿದೆ ಮತ್ತು ಅಧಿಕಾರಿಗಳಲ್ಲಿ ಆತ್ಮ ತೃಪ್ತಿಯನ್ನು ಹೆಚ್ಚಿಸಿದೆ.
ಆರೋಗ್ಯ ಸಚಿವಾಲಯ ಹೊರಡಿಸಿರುವ ಹೆಲ್ತ್ ಪಾಸ್‌ಪೋರ್ಟ್‌ಗಳು ಎರಡನೇ ಡೋಸ್ ಲಸಿಕೆ ಪಡೆದ ಹೆಚ್ಚಿನ ಜನರಿಗೆ ಲಭ್ಯವಾಗಿದೆ. ಆರೋಗ್ಯ ಪಾಸ್ಪೋರ್ಟ್ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಕಡ್ಡಾಯವಲ್ಲ, ಆದರೆ ಕೆಲವು ದೇಶಗಳಿಗೆ ವ್ಯಾಕ್ಸಿನೇಷನ್ ನಂತಹ ಸಂದರ್ಭಗಳಲ್ಲಿ ಇದು ಅಗತ್ಯವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.