ರಿಯಾದ್: ವಿದೇಶಿ ಕಾರ್ಮಿಕರ ಅಥವಾ ಅವರ ಕುಟುಂಬಸ್ಥರ ಪಾಸ್‌ಪೋರ್ಟ್‌ಗಳನ್ನು ತಡೆಹಿಡಿಯುವುದು ಕಾನೂನುಬಾಹಿರ ಎಂದು ಸೌದಿ ಕಾರ್ಮಿಕ ಸಚಿವಾಲಯ ಹೇಳಿದೆ. ಪಾಸ್ಪೋರ್ಟ್ ಉದ್ಯೋಗದಾತ ತಡೆಹಿಡಿದ್ದಾಗಿ ದೂರು ಲಭಿಸಿದರೆ ಐದು ಸಾವಿರ ರಿಯಾಲ್ ದಂಡ ವಿಧಿಸಲಾಗುತ್ತದೆ. ಈ ಸಂಬಂಧ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಚಿವಾಲಯ ಮತ್ತೆ ಎಚ್ಚರಿಕೆ ನೀಡಿದೆ.
ಸೌದಿ ಕಾನೂನಿನ ಪ್ರಕಾರ, ಉದ್ಯೋಗದಾತರು ನೌಕರರ ಪಾಸ್‌ಪೋರ್ಟ್‌ಗಳನ್ನು ತಡೆಹಿಡಿಯುವುದು ಕಾನೂನುಬಾಹಿರ. ಇದಕ್ಕೆ 5,000 ರಿಯಾಲ್ ದಂಡ ವಿಧಿಸಲಾಗುವುದು. ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮಾನವಶಕ್ತಿ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಎಚ್ಚರಿಕೆ ನೀಡಿದೆ.
ಆದಾಗ್ಯೂ, ಉದ್ಯೋಗದಾತನು ಕೆಲವು ಸಂದರ್ಭಗಳಲ್ಲಿ ಮಾತ್ರ ಕಾರ್ಮಿಕರ ಪಾಸ್‌ಪೋರ್ಟ್‌ಗಳನ್ನು ಇರಿಸಿಕೊಳ್ಳಬಹುದು. ಆದರೆ ಇದಕ್ಕೂ ಕಾರ್ಮಿಕರ ಲಿಖಿತ ಅನುಮತಿ ಪಡೆದಿರಬೇಕು. ಕೆಲಸಗಾರನಿಗೆ ಪಾಸ್‌ಪೋರ್ಟ್ ನಷ್ಟ ಅಥವಾ ಹಾನಿಯ ಭೀತಿ ಇದ್ದರೆ, ಪಾಸ್‌ಪೋರ್ಟ್ ಅನ್ನು ಉದ್ಯೋಗದಾತರಿಗೆ ಹಸ್ತಾಂತರಿಸಬಹುದು. ಅಂತಹ ಸಂದರ್ಭಗಳಲ್ಲಿ, ಕಾರ್ಮಿಕರು ಮರಳಿಸಲು ಬೇಡಿಕೆಯಿಟ್ಟರೆ ಕೂಡಲೇ ಪಾಸ್‌ಪೋರ್ಟ್‌ಗಳನ್ನು ಹಸ್ತಾಂತರಿಸಬೇಕು. ಪಾಸ್ಪೋರ್ಟ್ ಅನ್ನು ಕಡ್ಡಾಯವಾಗಿ ತಡೆಹಿಡಿಯಲಾಗಿದ್ದರೆ ಕಾರ್ಮಿಕನು ಸಚಿವಾಲಯಕ್ಕೆ ದೂರು ನೀಡಬಹುದು.