ರಿಯಾದ್: ಸೌದಿ ಅರೇಬಿಯಾದ ಕಂಪನಿಗಳಲ್ಲಿ ವ್ಯವಸ್ಥಾಪಕರಾಗಿ ವಿದೇಶಿಯರನ್ನು ನೇಮಿಸಬಹುದು ಎಂದು ನ್ಯಾಯ ಸಚಿವಾಲಯ ಹೇಳಿದೆ. ಈ ಹಿಂದಿನ ನಿಷೇಧವನ್ನು ತಡೆಹಿಡಿಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಸೌದಿ ಪ್ರಜೆಗಳ ಒಡೆತನದ ಕಂಪನಿಗಳಲ್ಲಿ ವಿದೇಶಿಯರನ್ನು ವ್ಯವಸ್ಥಾಪಕರಾಗಿ ನೇಮಕ ಮಾಡಲು ಅನುಮತಿಸಲಾಗಿದೆ ಎಂದು ವರದಿಯಾಗಿದೆ.
ಈ ಹಿಂದೆ ವಿದೇಶಿಯರನ್ನು ವ್ಯವಸ್ಥಾಪಕರಾಗಿ ನೇಮಿಸುವುದನ್ನು ನಿಷೇಧಿಸಲಾಗಿತ್ತು. ಹಿಜ್ರಾ 1426 ರಲ್ಲಿ ಘೋಷಿಸಿದ ಮಂತ್ರಿಮಂಡಲದ ತೀರ್ಮಾನದ ಎರಡನೇ ಪ್ಯಾರಾಗ್ರಾಫ್ ಪ್ರಕಾರ, ಸೌದಿ ಕಂಪನಿಗಳಲ್ಲಿ ವಿದೇಶಿಯರನ್ನು ವ್ಯವಸ್ಥಾಪಕರಾಗಿ ನೇಮಕ ಮಾಡಲು ಅವಕಾಶವಿರಲಿಲ್ಲ. ಇದೀಗ ಈ ನಿರ್ಧಾರವನ್ನು ತಡೆಹಿಡಿಯಲಾಗಿದೆ ಎಂದು ನ್ಯಾಯ ಸಚಿವಾಲಯ ತಿಳಿಸಿದೆ.ಕಾನೂನು ಸಚಿವ ಡಾ. ವಲೀದ್ ಅಲ್ ಸಮ್ಆನಿ ಈ ನಿಟ್ಟಿನಲ್ಲಿ ಹೊಸ ಸುತ್ತೋಲೆ ಹೊರಡಿಸಿದ್ದಾರೆ.