janadhvani

Kannada Online News Paper

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಹುನಿರೀಕ್ಷಿತ ರೈಲು ಸೇವೆ ಆರಂಭ

ಬೆಂಗಳೂರು: ನಗರದ ಹೃದಯಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹಾಲ್‌ಸ್ಟೇಷನ್‌ವರೆಗೆ (ಕೆಐಎಡಿ) ಬಹುನಿರೀಕ್ಷಿತ ಉಪನಗರ ರೈಲು ಸೇವೆ ನಾಳೆಯಿಂದ ಅಂದರೆ ಜನವರಿ 4 ಸೋಮವಾರದಿಂದ ಆರಂಭವಾಲಿದೆ.

ನಗರದ ವಿವಿಧೆಡೆಯಿಂದ ಹಾಲ್‌ಸ್ಟೇಷನ್‌ವರೆಗೆ ಒಟ್ಟು ಹತ್ತು ರೈಲುಗಳು ಕಾರ್ಯಾಚರಿಸಲಿವೆ. ದೇವನಹಳ್ಳಿಯಿಂದ ಮೂರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣ ಮತ್ತು ಬಂಗಾರಪೇಟೆಯಿಂದ (ಬಿಡಬ್ಲ್ಯುಟಿ) ತಲಾ ಎರಡು, ಯಲಹಂಕ (ವೈಎಲ್‌ಕೆ), ಯಶವಂತಪುರ (ವೈಪಿಆರ್‌) ಹಾಗೂ ಬೆಂಗಳೂರು ಕಂಟೋನ್ಮೆಂಟ್‌ನಿಂದ (ಬಿಎನ್‌ಸಿ) ತಲಾ ಒಂದು ರೈಲು ಈ ಮಾರ್ಗದಲ್ಲಿ ಸಂಚರಿಸಲಿವೆ.

ಈ ಬಗ್ಗೆ ರೈಲ್ವೈ ಅಧಿಕಾರಿಗಳು ಮಾಹಿತಿ ನೀಡಿದ್ದು, ‘ಪ್ರಾರಂಭಿಕ ಹಂತದಲ್ಲಿ ಹತ್ತು ರೈಲುಗಳು ಸಂಚಾರ ಆರಂಭಿಸಲಿವೆ. ಪ್ರಯಾಣಿಕರ ಸ್ಪಂದನೆ ನೋಡಿಕೊಂಡು ರೈಲುಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ಸೋಮವಾರ ಬೆಳಿಗ್ಗೆ 4.41ರಿಂದ ಮೊದಲ ರೈಲು ಕೆಎಸ್‌ಆರ್‌ನಿಂದ ಕೆಐಎಡಿಗೆ ಹೊರಡಲಿದೆ. ದಟ್ಟಣೆಯ ಸಂದರ್ಭದಲ್ಲಿ ಹೆಚ್ಚು ಸೇವೆ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

ವಿಮಾನಿಲ್ದಾಣದಿಂದ ಯಾವ ಅವಧಿಯಲ್ಲಿ ಹೆಚ್ಚು ವಿಮಾನಗಳು ಬಂದಿಳಿಯುತ್ತವೆ ಹಾಗೂ ಹಾರಾಟ ನಡೆಸಲಿವೆ ಎಂಬ ಆಧಾರದ ಮೇಲೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಹೆಚ್ಚು ವಿಮಾನಗಳು ಸಂಚರಿಸುವ ಅವಧಿಗೂ ಮುಂಚೆ ರೈಲುಗಳು ಹಾಲ್‌ಸ್ಟೇಷನ್‌ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಐದು, ಸಂಜೆ ಐದು ರೈಲುಗಳು ಸಂಚರಿಸಲಿವೆ. ಪ್ರಾರಂಭದಲ್ಲಿ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗುತ್ತದೆ. ಕ್ರಾಂತಿವೀರ ಸಂಗೊಳ್ಳಿರಾಯಣ್ಣ (ಕೆಆರ್‌ಎಸ್‌) ನಗರ ರೈಲು ನಿಲ್ದಾಣದಿಂದ ಹಾಲ್‌ಸ್ಟೇಷನ್‌ಗೆ ತಲುಪಲು 50 ನಿಮಿಷ ಬೇಕಾಗುತ್ತದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ನಿಲುಗಡೆ ರಹಿತ ಸೇವೆ ಒದಗಿಸಲಾಗುತ್ತದೆ. ಆಗ ಪ್ರಯಾಣದ ಅವಧಿ ಸಾಕಷ್ಟು ಕಡಿಮೆಯಾಗಲಿದೆ. ಟಿಕೆಟ್‌ ದರ ಬಹಳ ಕಡಿಮೆ ಇರುವುದರಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರ- ಕೆಐಎಡಿ ನಡುವೆ ವಿಶೇಷವಾಗಿ ಮೂರು ಜೋಡಿ ಡೆಮು ರೈಲುಗಳು ಸಂಚರಿಸಲಿವೆ. ವಾರದಲ್ಲಿ ಆರು ದಿನಗಳು (ಭಾನುವಾರ ಹೊರತುಪಡಿಸಿ) ಈ ಸೇವೆ ಇರಲಿದೆ. ಎರಡು ಮೋಟಾರು ಕಾರು ಸೇರಿ ಒಟ್ಟು ಎಂಟು ಬೋಗಿಗಳ ರೈಲುಗಳನ್ನು ಪರಿಚಯಿಸಲಾಗುತ್ತಿದೆ. ಇವು ಒಟ್ಟಾರೆ 2,402 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿವೆ. ರೈಲಿನ ಪ್ರತಿ ಬೋಗಿಯು 84 ಆಸನಗಳು ಸೇರಿ 325 ಪ್ರಯಾಣಿಕರ ಸಾಮರ್ಥ್ಯ ಹೊಂದಿರುತ್ತವೆ. ಮೋಟಾರು ಕಾರುಗಳ ಸಾಮರ್ಥ್ಯ 55 ಆಸನಗಳು ಸೇರಿ 226 ಆಗಿರುತ್ತದೆ.

ವಿಮಾನ ನಿಲ್ದಾಣಕ್ಕೆ ಹೆಚ್ಚಿನ ರೈಲುಗಳು
ರೈಲು ಸಂಖ್ಯೆ 06285 ಕೆಎಸ್‌ಆರ್‌ನಿಂದ ಮುಂಜಾನೆ 4.45 ಕ್ಕೆ ಹೊರಟು ಮಾರನೆಯ ದಿನ ಬೆಳಿಗ್ಗೆ 5.50 ಕ್ಕೆ ಕಿಯಾಡ್ ಗೆ ತಲುಪಲಿದೆ. ರೈಲು ಸಂಖ್ಯೆ. 06286 ರಾತ್ರಿ 10.30 ಕ್ಕೆ ಹೊರಟು, ರಾತ್ರಿ 10.37 ಕ್ಕೆ ಕೆಐಎಡಿ, ರಾತ್ರಿ 11.35 ಕ್ಕೆ ಕಂಟೋನ್ಮೆಂಟ್ ತಲುಪುತ್ತದೆ ಮತ್ತು ರಾತ್ರಿ 11.55ಕ್ಕೆ ನಗರ ನಿಲ್ದಾಣ ತಲುಪಲಿದೆ. ರೈಲು ಸಂಖ್ಯೆ 06285 ಕೆಎಸ್‌ಆರ್‌ನಿಂದ ಮುಂಜಾನೆ 4.45 ಕ್ಕೆ ಹೊರಟು ಬೆಳಿಗ್ಗೆ 5.50 ಕ್ಕೆ ಕಿಯಾಡ್ ತಲುಪುತ್ತದೆ. ರೈಲು ಸಂಖ್ಯೆ. 06286 ರಾತ್ರಿ 10.30 ಕ್ಕೆ ಹೊರಟು, ರಾತ್ರಿ 10.37 ಕ್ಕೆ ಕೆಐಎಡಿ, ರಾತ್ರಿ 11.35 ಕ್ಕೆ ಕಂಟೋನ್ಮೆಂಟ್ ತಲುಪುತ್ತದೆ ಮತ್ತು ರಾತ್ರಿ 11.55 ಕ್ಕೆ ನಗರದಲ್ಲಿ ಹಾಲ್ಚ್ ಆಗುತ್ತದೆ.

ರೈಲು ಸಂಖ್ಯೆ 06283 ಕೆಎಸ್‌ಆರ್‌ನಿಂದ ರಾತ್ರಿ 9 ಗಂಟೆಗೆ ಹೊರಟು ರಾತ್ರಿ 10.05 ಕ್ಕೆ ಕೆಐಎ ತಲುಪುತ್ತದೆ. ಅಂತೆಯೇ ರೈಲು ಸಂಖ್ಯೆ 06284 ದೇವನಹಳ್ಳಿಯಿಂದ ಬೆಳಿಗ್ಗೆ 7.45 ಕ್ಕೆ ಪ್ರಾರಂಭವಾಗುತ್ತದೆ, ಬೆಳಿಗ್ಗೆ 7.50 ಕ್ಕೆ ಕೆಐಎಯಲ್ಲಿ ನಿಲ್ಲುತ್ತದೆ ಮತ್ತು ಬೆಳಿಗ್ಗೆ 8.50 ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ಹಾಲ್ಟ್ ಆಗಲಿದೆ.

ರೈಲು ಸಂಖ್ಯೆ. 06279 ಯಶವಂತಪುರದಲ್ಲಿ ಬೆಳಿಗ್ಗೆ 8.30 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಕೆಐಎಡಿಬಿ 9.16 ಕ್ಕೆ ನಿಲ್ಲುತ್ತದೆ. ಇದು ಬಂಗಾರ್ ಪೇಟೆಯಿಂದ ಸಂಜೆ 4 ಗಂಟೆಗೆ ಹೊರಟು, ಸಂಜೆ 6.42 ಕ್ಕೆ ಕೆಐಎ ತಲುಪುತ್ತದೆ ಮತ್ತು ರಾತ್ರಿ 8.20 ಕ್ಕೆ ಕೆಎಸ್‌ಆರ್‌ನಲ್ಲಿ ಹಾಲ್ಟ್ ಆಗುತ್ತದೆ. ರೈಲು ಸಂಖ್ಯೆ. 06269 ಕಂಟೋನ್ಮೆಂಟ್‌ನಿಂದ ಹೊರಟು ಮತ್ತು ಸಂಜೆ 6.50 ಕ್ಕೆ ಕೆಐಎಯಲ್ಲಿ ನಿಲ್ಲುತ್ತದೆ. ರೈಲು ಸಂಖ್ಯೆ. 06270 ಯಶವಂತಪುದಲ್ಲಿ ಬೆಳಿಗ್ಗೆ 5.30 ಕ್ಕೆ ಹೊರಟು, ಬೆಳಿಗ್ಗೆ 8.21 ಕ್ಕೆ ಕೆಐಎಯಲ್ಲಿ ನಿಲ್ಲುತ್ತದೆ ಮತ್ತು ಬೆಳಿಗ್ಗೆ 9.25 ಕ್ಕೆ ಯಶವಂತಪುರದಲ್ಲಿ ಕೊನೆಗೊಳ್ಳುತ್ತದೆ.

error: Content is protected !! Not allowed copy content from janadhvani.com