janadhvani

Kannada Online News Paper

ಸೌದಿ ಅರೇಬಿಯಾ: ಅವಲಂಬಿತರ ಲೆವಿ ಪಾವತಿಗೆ ವಿನಾಯಿತಿ

ರಿಯಾದ್: ದೇಶದಲ್ಲಿ ಅವಲಂಬಿತರ ಲೆವಿ ಪಾವತಿಸಲು ಸಮಯಾವಕಾಶ ನೀಡುವ ಬಗ್ಗೆ ಯೋಚಿಸುತ್ತಿದೆ ಎಂದು ಸೌದಿ ಸಚಿವಾಲಯ ಹೇಳಿದೆ. ವಿದೇಶಿ ಕಾರ್ಮಿಕರ ಅವಲಂಬಿತರಿಗೆ ವಿಧಿಸುವ ಲೆವಿಯನ್ನು ಕಂತುಗಳಾಗಿ ಪಾವತಿಸಲು ಸಚಿವಾಲಯ ವಿನಾಯಿತಿ ನೀಡಿದೆ. ಮಾನವ ಸಂಪನ್ಮೂಲ ಸಚಿವಾಲಯ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ದೇಶದ ವಿದೇಶಿ ಕಾರ್ಮಿಕರ ಅವಲಂಬಿತರ ತೆರಿಗೆಯನ್ನು ಕ್ರಮೇಣ ಹೆಚ್ಚಿಸುವ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿಸಿದ ಮೊತ್ತವನ್ನು ಪಾವತಿಸಲು ಜನರು ಕಷ್ಟಪಡುತ್ತಿರುವುದರಿಂದ ಸಚಿವಾಲಯವು ಸಮಯಾವಕಾಶ ಕುರಿತು ಚರ್ಚೆಗಳನ್ನು ಪ್ರಾರಂಭಿಸಿದೆ.

ಒಂದು ವರ್ಷದ ಅವಲಂಬಿತರ ಲೆವಿಯನ್ನು ಪಾವತಿಸಲು ಅನುಕೂಲವಾಗುವಂತೆ ಕಂತುಗಳಾಗಿ ವಿಂಗಡಿಸಲು ಮಾನವ ಸಂಪನ್ಮೂಲ ಸಚಿವಾಲಯ ಯೋಜಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇದಕ್ಕಾಗಿ ಆರಂಭಿಕ ಕಾರ್ಯಗಳನ್ನು ಸಚಿವಾಲಯ ಪ್ರಾರಂಭಿಸಿದೆ. ಮೂರು ತಿಂಗಳಾಗಿ ನಾಲ್ಕು ಬಾರಿ ಅಥವಾ ವರ್ಷದಲ್ಲಿ ಎರಡು ಬಾರಿ ಮೊತ್ತವನ್ನು ಪಾಲತಿಸಲು ಸೌಲಭ್ಯವನ್ನು ಏರ್ಪಡಿಸಲಾಗುವುದು.

ಅವಲಂಬಿತರ ಲೆವಿ ಪಾವತಿಗೆ ಸಮಯಾವಕಾಶವು, ದೇಶದಲ್ಲಿ ಇತ್ತೀಚೆಗೆ ಘೋಷಿಸಲಾದ ಉದ್ಯೋಗ ಬದಲಾವಣೆಗಳ ಮುಂದುವರಿಕೆಯಾಗಿದೆ. ಈ ಹಿಂದೆ, ವಿದೇಶಿ ಕಾರ್ಮಿಕರಿಗೆ ಪ್ರಾಯೋಜಕತ್ವದ ವ್ಯವಸ್ಥೆಯನ್ನು ರದ್ದುಗೊಳಿಸಲು ಮತ್ತು ಅದನ್ನು ಉದ್ಯೋಗ ಒಪ್ಪಂದಗಳಿಗೆ ಮಾತ್ರ ಸೀಮಿತಗೊಳಿಸಲು ಸಚಿವಾಲಯ ಅನುಮತಿ ನೀಡಿತ್ತು. ಮುಂದಿನ ಮಾರ್ಚ್‌ನಿಂದ ದೇಶದಲ್ಲಿ ಈ ಕಾನೂನು ಜಾರಿಗೆ ಬರುತ್ತಿರುವುದರಿಂದ, ಅವಲಂಬಿತರ ತೆರಿಗೆಯ ಮೇಲಿನ ವಿನಾಯಿತಿಯನ್ನು ಅನುಮತಿಸಲಾಗಿದೆ.

error: Content is protected !! Not allowed copy content from janadhvani.com