ಮಂಗಳೂರು,ಡಿ.18: ಇತ್ತೀಚೆಗೆ ದಾಂಪತ್ಯ ವಿವಾದಕ್ಕೊಳಗಾಗಿದ್ದ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ಮತ್ತು ಆಸಿಯಾ ನಡುವಿನ ಸಮಸ್ಯೆ ಇತ್ಯರ್ಥಗೊಂಡಿದ್ದು, ಮುಸ್ಲಿಂ ಒಕ್ಕೂಟ ಧನ್ಯವಾದ ಸಲ್ಲಿಸಿದೆ.
ಪತ್ನಿ ಆಸಿಯಾಳು ನಿನ್ನೆಯವರೆಗೆ ತನ್ನ ಪತಿಯನ್ನು ದೊರಕಿಸಿ ಕೊಡಿ ಎಂದು ವಿವಿಧ ಸಂಘಟನೆಗಳು, ಧಾರ್ಮಿಕ ಸಂಸ್ಥೆ, ಪೊಲೀಸ್ ಇಲಾಖೆ, ಮಾಧ್ಯಮ ಇತ್ಯಾದಿಗಳಲ್ಲಿ ಬೇಡಿಕೆ ಇಟ್ಟು, ಅಂತಿಮವಾಗಿ ಕಟ್ಟೆಕ್ಕಾರ್ ಫುಟ್ ವೇರ್ ವಾಣಿಜ್ಯ ಮಳಿಗೆಯಲ್ಲಿ ಧರಣಿ ಕುಳಿತು ಕೊಂಡು,ತನ್ನ ಗಂಡ ನಿಗಾಗಿ ಕಾದಿದ್ದಳು.
ಖಲೀಲ್ ಇನ್ನು ಕೆಲವೇ ದಿನಗಳಲ್ಲಿ ಊರಿಗೆ ಮರಳಿ ಬರಲಿದ್ದು,ಇಂದು ಬೆಳಿಗ್ಗೆ ಕಟ್ಟೆಕ್ಕಾರ್ ಕುಟುಂಬ ಶಾಂತಿ ಜೂಬಿ ಆಲಿಯಾಸ್ ಆಸಿಯಾಳನ್ನು ತಮ್ಮ ಕುಟುಂಬದ ಮನೆಗೆ ಸೇರಿಸಿದ್ದಾರೆ. ಅದರಂತೆಯೇ ಆಸಿಯಾಳು ಇಂದು ಬೆಳಿಗ್ಗೆ ಮನೆ ಸೇರಿದ್ದಾಳೆ . ಕುಟುಂಬಸ್ಥರು ಆಸಿಯಾಳಿಗೆ ತಮ್ಮಿಂದ ಆದ ಅನ್ಯಾಯವನ್ನು ಸರಿ ಪಡಿಸುವ ಉದ್ದೇಶದಿಂದ ಆಸಿಯಾಳನ್ನು ತಮ್ಮ ಕುಟುಂಬದ ಸೊಸೆಯಾಗಿ ಸ್ವೀಕರಿಸಿರುವುದಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಧನ್ಯವಾದ ವ್ಯಕ್ತಪಡಿಸುತ್ತದೆ ಎಂದು ದ. ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ಇದರ ಅಧ್ಯಕ್ಷರಾದ ಕೆ.ಅಶ್ರಫ್ ತಿಳಿಸಿದ್ದಾರೆ.
ಈ ಬಗ್ಗೆ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟ ಹಾಗೂ ಸುಳ್ಯ ಜಮಾಅತ್ ಇತ್ತೀಚೆಗೆ ಮಾತುಕತೆ ನಡೆಸಿದ್ದರೂ ಮಾತುಕತೆಗೆ ಖಲೀಲ್ ಕಟ್ಟೆಕ್ಕಾರ್ ಬಾರದ ಹಿನ್ನಲೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿರಲಿಲ್ಲ. ಖಲೀಲ್ ಬರುವವರೆಗೂ ಕಟ್ಟೆಕ್ಕಾರ್ ಫೂಟ್‌ವೇರ್‌ನಲ್ಲಿ ಧರಣಿ ಕುಳಿತುಕೊಳ್ಳುವುದಾಗಿ ಹೇಳಿದ್ದ ಆಸಿಯಾ ಡಿ.9ರಿಂದ ಅಲ್ಲಿದ್ದರು. ಹಗಲು ಪೂರ್ತಿ ಪ್ಫೂಟ್‌ವೇರ್‌ನಲ್ಲಿ ಧರಣಿ ಕುಳಿತಿದ್ದ ಆಸಿಯಾಳಿಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು.
ಹಲ್ಲೆಗೆ ಮುಸ್ಲಿಮ್ ಒಕ್ಕೂಟ ಖಂಡನೆ
ಇಂದು ಬೆಳಿಗ್ಗೆ ದಾಂಪತ್ಯ ಸಂತ್ರಸ್ತೆ ಆಸಿಯಾ, ಕಟ್ಟೆಕ್ಕಾರ್ ಕುಟುಂಬದ ಮನೆ ಸೇರಿದ್ದು,ಸಾಮಾಜಿಕ ಜಾಲ ತಾಣಗಳಲ್ಲಿ ಆಸಿಯಾ ಮೇಲೆ ಕಟ್ಟೆಕ್ಕಾರ್ ಕುಟುಂಬಸ್ಥರು ದೈಹಿಕ ಹಲ್ಲೆ ನಡೆಸಿದ ಬಗ್ಗೆ ದೃಶ್ಯಗಳು ರವಾನೆ ಯಾಗುತ್ತಿದ್ದು,ಮಹಿಳೆಯ ಮೇಲಿನ ಹಲ್ಲೆಗೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ.
ಆಸಿಯಾಳ ದಾಂಪತ್ಯ ವಿಷಯದಲ್ಲಿ ಕಟ್ಟೆಕ್ಕಾರ್ ಕುಟುಂಬವು ಸಮರ್ಪಕ ನಿರ್ಧಾರ ತಳೆಯುವುದು ಒಳಿತು,ತಪ್ಪಿದಲ್ಲಿ ಭಾರಿ ಅನಾಹುತಕ್ಕೆ ಬೆಲೆ ತೆರ ಬೇಕಾದೀತು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಎಚ್ಚರಿಸಿದ್ದಾರೆ.







