ಮಸ್ಕತ್ : ಭಾರತೀಯರು ಸೇರಿದಂತೆ 103 ದೇಶಗಳಿಂದ ಒಮಾನ್‌ಗೆ ವೀಸಾ ಮುಕ್ತ ಪ್ರವೇಶವನ್ನು ಅನುಮತಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಹತ್ತು ದಿನಗಳ ಕಾಲ ಒಮಾನ್‌ನಲ್ಲಿ ಉಳಿಯಲು ಅವಕಾಶವಿರುತ್ತದೆ.
ವೀಸಾ ಮುಕ್ತ ಪ್ರವೇಶವನ್ನು ಕಠಿಣ ಷರತ್ತುಗಳೊಂದಿಗೆ ಜಾರಿಗೆ ತರಲಾಗುವುದು ಎಂದು ರಾಯಲ್ ಒಮಾನ್ ಪೊಲೀಸ್ ಪಾಸ್‌ಪೋರ್ಟ್ ಮತ್ತು ನಿವಾಸ ವಿಭಾಗ ಕರ್ನಲ್ ಅಲ್ ಸುಲೈಮಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹತ್ತು ದಿನಗಳಿಗಿಂತ ಹೆಚ್ಚು ಕಾಲ ಇರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಹೆಚ್ಚುವರಿ ವಾಸ್ತವ್ಯಕ್ಕೆ ಪ್ರತೀ ದಿನಕ್ಕೆ 10 ರಿಯಾಲ್ ದಂಡ ವಿಧಿಸಲಾಗುತ್ತದೆ. ಆರೋಗ್ಯ ವಿಮೆ, ಕಾಯ್ದಿರಿಸಿದ ಹೋಟೆಲ್ ದಾಖಲೆ ಮತ್ತು ರಿಟರ್ನ್ ಟಿಕೆಟ್ ಹೊಂದಿರಬೇಕು.
ವಿದೇಶಿ ಕೆಲಸಗಾರ ದೇಶದಿಂದ ಹೊರಗಿದ್ದರೆ ಅವಧಿ ಮೀರಿದ ವೀಸಾವನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು ಎಂದು ರಾಯಲ್ ಒಮಾನ್ ಪೊಲೀಸ್ ಕರ್ನಲ್ ಸುಲೈಮಾನಿ ಹೇಳಿದರು.