ಮಂಗಳೂರು: ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ಐತಿಹಾಸಿಕ 200 ನೇ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಮಿತ್ತೂರು ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ಜರುಗಿತು.
ಜಿಲ್ಲೆಯ ಹತ್ತು ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಕೆಜಿಎನ್ ಕ್ಯಾಂಪಸ್ ಮಿತ್ತೂರಿನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಶಿಸ್ತುಬದ್ಧವಾಗಿ ಕಾರ್ಯಕ್ರಮ ಸಂಯೋಜನೆಗೊಂಡಿತ್ತು.
ಎಸ್ಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಸಭಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೋಶಾಧಿಕಾರಿ ಅಲಿ ತುರ್ಕಳಿಕೆ ಮುನ್ನುಡಿ ಮಾತುಗಳನ್ನಾಡಿದರು. ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಹಿತವಚನ ನೀಡಿ ರಕ್ತದಾನ ಮಹತ್ವ ವಿವರಿಸಿದರು.
110 ಬಾರಿ ರಕ್ತದಾನ ಮಾಡಿದ ಸುಧಾಕರ್ ರೈ ಸುಳ್ಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಒಡಿಯೂರು ಶ್ರೀ ಗುರುದೇವದತ್ತ ಮಹಾ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮುಖ್ಯ ಅತಿಥಿ ಪೀಠದಿಂದ ಮಾತನಾಡಿ, ರಕ್ತದಾನ ಶಿಬಿರಗಳು ಸಮಾಜದ ಅಭ್ಯುದಯಕ್ಕೆ ಕಾರಣವಾಗಿದ್ದು ಎಲ್ಲರೂ ಸಮಾಜ ಕಟ್ಟುವ ಕಾರ್ಯ ಮಾಡಬೇಕು ಎಂದರು.
ಐತಿಹಾಸಿಕ 200 ನೇ ಕ್ಯಾಂಪ್‌ನಲ್ಲಿ ದಾಖಲೆಯ 613 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಈ ಸಮಾರಂಭದಲ್ಲಿ ಮಾಜಿ ಸಚಿವರಾದ ರಮಾನಾಥ ರೈ ಮತ್ತು ಯು.ಟಿ.ಖಾದರ್ ಸ್ಪೂರ್ತಿ ನೀಡಿದರು.
ಜಿ.ಎಂ ಕಾಮಿಲ್ ಸಖಾಫಿ, ಪಿ.ಪಿ.ಸಖಾಫಿ ಕಾಶಿಪಟ್ಣ, ವಿಟ್ಲ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿನೋದ್ ಕುಮಾರ್, ಹಾಫಿಳ್ ಸುಫ್ಯಾನ್ ಸಖಾಫಿ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್ ಮುಹಮ್ಮದ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ, ಸುದೀಪ್ ಕುಮಾರ್, ಇಸ್ಮಾಈಲ್ ಮಾಸ್ಟರ್ ಮಂಗಿಳಪದವು, ಮುಹಮ್ಮದಲಿ ಸಖಾಫಿ ಅಶ್‌ಅರಿಯ, ಶರೀಫ್ ಮಾಸ್ಟರ್ ಮೊಂಟೆಪದವು, ಶರೀಫ್ ನಂದಾವರ, ತೌಸೀಫ್ ಸಅದಿ ಹರೇಕಳ, ಕರೀಂ ಕದ್ಕಾರ್, ಯುವ ನ್ಯಾಯವಾದಿ ಅಸ್ಗರ್, ಪತ್ರಕರ್ತ ಶಂಶೀರ್ ಬುಡೋಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಯ್ಯಿದ್ ಖುಬೈಬ್ ತಂಙಳ್ ಉಳ್ಳಾಲ, ಕೆಸಿಎಫ್ ನಾಯಕರಾದ ಖಲಂದರ್ ಕಬಕ, ಅಶ್ರಫ್ ಕಟ್ಟದಪಡ್ಪು, ಖಲಂದರ್ ಬಾಳೆಹೊನ್ನೂರು, ಮುಹಮ್ಮದ್ ಕುಂಬ್ರ, ನಾಸಿರ್ ಬೇಂಗಿಲ, ಹಮೀದ್ ಹಾಜಿ ಕೊಡುಂಗಾಯಿ, ಕೊಂಬಾಳಿ ಕೆ.ಎಂ.ಎಚ್ ಝುಹ್ರಿ, ಸಲೀಂ ಹಾಜಿ ಬೈರಿಕಟ್ಟೆ ಸಹಿತ ಇತರ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ ಸ್ವಾಗತಿಸಿ, ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಬೆರ್ಕಳ ಕಾರ್ಯಕ್ರಮ ನಿರೂಪಿಸಿದರು.