janadhvani

Kannada Online News Paper

ತಾಜುಲ್ ಫುಖಹಾಅ್ ಅನುಸ್ಮರಣೆ ಯಶಸ್ವಿಗೆ ತಲಕ್ಕಿ ತಂಙಳ್ ಕರೆ

ತಾಜುಲ್‌ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ತಲಕ್ಕಿ , ಇದರ ಅಂತರಾಷ್ಟ್ರೀಯ ಸಮಿತಿಯ ವತಿಯಿಂದ , ಇತ್ತೀಚಿಗೆ ನಮ್ಮನ್ನು ಅಗಲಿದ ಮರ್ಹೂಂ ತಾಜುಲ್ ಫುಖಹಾಅ್ ಶೈಖುನಾ ಬೇಕಲ್ ಉಸ್ತಾದ್ ರ ಅನುಸ್ಮರಣೆ ಕಾರ್ಯಕ್ರಮವನ್ನು ದಿನಾಂಕ 2-10-2020 ರಂದು ಭಾರತೀಯ ಕಾಲಮಾನ ರಾತ್ರಿ 9.30 ಗಂಟೆಗೆ ಝೂಮ್ ಓನ್ಲೈನ್ ಮುಖಾಂತರ ನಡೆಯಲಿದೆ.

ಸಂಸ್ಥೆಯ ರೂವಾರಿ ಅಸ್ಸಯ್ಯದ್ ಅಹ್ಮದ್ ಶಿಹಾಬುದ್ದೀನ್ ಅಲ್ ಮಶ್ಹೂರ್ ತಂಙಳ್ ಕಾರ್ಯಕ್ರಮಕ್ಕೆ ದುಆ ನೇತ್ರತ್ವ ನೀಡಲಿದ್ದು, ಉದ್ಘಾಟನೆಯನ್ನು ಕೆ.ಸಿ.ಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ. ಶೇಖ್ ಬಾವ ಹಾಜಿಯವರು ನಡೆಸಲಿದ್ದಾರೆ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರ್ಶೋಲ ರವರು ಮುಖ್ಯ ಪ್ರಭಾಷಣ ಮಾಡಲಿದ್ದು, ಕಾರ್ಯಕ್ರಮಕ್ಕೆ ದೇಶ ವಿದೇಶಗಳ ತಾಜುಲ್ ಉಲಮಾ ಅಭಿಮಾನಿಗಳು ಹಾಗೂ ಕೆ.ಸಿ.ಎಫ್ ನಾಯಕರು ಮತ್ತು ಸದಸ್ಯರು ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ, ಕೆ.ಸಿ.ಎಫ್ ಅಂತಾರಾಷ್ಟ್ರೀಯ ಸಮಿತಿಯ ಫೈನಾನ್ಸ್ ಕಂಟ್ರೋಲರ್ ಹಮೀದ್ ಸ:ಅದಿ, ಈಶ್ವರಮಂಗಳ ಹಾಗೂ ಜಿ.ಸಿ.ಸಿ ರಾಷ್ಟ್ರಗಳ ಕೆ.ಸಿ.ಎಫ್ ರಾಷ್ಟ್ರೀಯ ಅಧ್ಯಕ್ಷರು ಆಶಂಸ ಭಾಷಣ ನಡೆಸಲಿದ್ದಾರೆ.

ಕಾರ್ಯಕ್ರಮ ಭಾರತದ ಕಾಲಮಾನ ರಾತ್ರಿ 9.30 ಕ್ಕೆ ಸರಿಯಾಗಿ ನಡೆಯಲಿರುವುದು. ಯು.ಎ.ಇ ಕಾಲಮಾನ ರಾತ್ರಿ 8ಕ್ಕೆ ಸೌದಿ ಅರೇಬಿಯಾ, ಒಮಾನ್ ಬಹ್ ರೈನ್, ಕುವೈತ್,ಕತ್ತಾರ್ ನಲ್ಲಿ,ರಾತ್ರಿ ಸಮಯ 7 ಕ್ಕೆ,ಯು.ಕೆ ಯಲ್ಲಿ ಸಂಜೆ 5 ಗಂಟೆಗೆ ಹಾಗೂ ಮಲೆಷ್ಯಾದಲ್ಲಿ ರಾತ್ರಿ 12ಕ್ಕೆ ಸರಿಯಾಗಿ ನಡೆಸಲಾಗವುದು ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.