janadhvani

Kannada Online News Paper

ಅಳಿಕೆ: ಅ.3 ರಂದು ಮರ್ಹೂಂ ಇಬ್ರಾಹಿಂ ಕಟ್ಟೆಯವರ ಸ್ಮರಣಾರ್ಥ ರಕ್ತದಾನ ಶಿಬಿರ

ವಿಟ್ಲ: ಅಳಿಕೆ ಮರ್ಹೂಂ ಇಬ್ರಾಹಿಂ ಕಟ್ಟೆ ರವರ ಸ್ಮರಣಾರ್ಥ, SYS.SSF.KCF ಅಳಿಕೆ ವತಿಯಿಂದ SSF ವಿಟ್ಲ SECTOR ನ ಸಹಕಾರದೊಂದಿಗೆ ರೆಡ್ ಕ್ರಾಸ್ ಮತ್ತು ಲೇಡಿಗೋಶನ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ದಿನಾಂಕ :03/10/2020 ರಂದು ಶನಿವಾರ ಬೆಳಗ್ಗೆ 8:00 ರಿಂದ ಮಧ್ಯಾಹ್ನ 1:30 ವರೆಗೆ ರಕ್ತ ದಾನ ಶಿಬಿರ ನಡೆಸಲಾಗುವುದು.

ಕಾರ್ಯಕ್ರಮದ ಅತಿಥಿಗಳಾಗಿ :
ಅಲ್ ಹಾಜ್ ಇಬ್ರಾಹಿಂ ಮುಸ್ಲಿಯಾರ್ ಅಳಿಕೆ,
SYS ಅಳಿಕೆ ಬ್ರಾಂಚ್ ಅಧ್ಯಕ್ಷರಾದ AP ಉಮ್ಮರ್ ಉಸ್ತಾದ್, ಅಳಿಕೆ ಮಸೀದಿ ಅಧ್ಯಕ್ಷರಾದ ಶೇಖ್ ಅಲಿ ಚೆಂಡುಕಲ, ಅಬೂಬಕ್ಕರ್ ಹಾಜಿ ಬೈರಿಕಟ್ಟೆ, ಯಶೋಧರ ಬಂಗೇರ ಅಳಿಕೆ,ಪದ್ಮನಾಭ ಪೂಜಾರಿ ಸಣ್ಣಗುತ್ತು, ರಘು ಮಾಸ್ಟರ್ ಅಳಿಕೆ, ರೂಪೇಶ್ ಅಳಿಕೆ ಮುಂತಾದ ಅತಿಥಿಗಳು ಭಾಗವಹಿಸಲಿದ್ದಾರೆ.

‘ರಕ್ತ ದಾನ ಮಾಡಿ ಮತ್ತೊಬ್ಬರ ಜೀವ ಉಳಿಸೋಣ’.
ರಕ್ತ ದಾನ -ಜೀವ ದಾನ.

ಸ್ಥಳ ಅಳಿಕೆ ಜಂಕ್ಷನ್ ನಲ್ಲಿ ನಡೆಯಲಿರುವ ರಕ್ತದಾನ ಶಿಬಿರದಲ್ಲಿ ತಾವೆಲ್ಲರೂ ಬಂದು , ರಕ್ತದಾನ ನೀಡಿ ಸಹಕರಿಸಬೇಕೆಂದು ತಮ್ಮೆಲ್ಲರಲ್ಲಿ ವಿನಯ ಪೂರ್ವಕ ವಿನಂತಿಸುವೆವು .
SSF, SYS, KCF ಅಳಿಕೆ.