ಗುರುವಾಯನಕೆರೆ : ಎಸ್ಸೆಸ್ಸಫ್ ಗುರುವಾಯನಕೆರೆ ಸೆಕ್ಟರ್ ಸಮಿತಿ ವತಿಯಿಂದ ಸೆಕ್ಟರ್ ವ್ಯಾಪ್ತಿಯ ಕ್ಯಾಂಪಸ್ ವಿದ್ಯಾರ್ಥಿಗಳಿಗಾಗಿ CAM-PULSE ಶೈಕ್ಷಣಿಕ ಮಾಹಿತಿ ಕಾರ್ಯಗಾರವು ಸುನ್ನತ್ ಕೆರೆಯಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷರಾದ ಜಮಾಲುದ್ದೀನ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಬೆರ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಶೈಕ್ಷಣಿಕವಾಗಿ ಪ್ರಗತಿಯನ್ನು ಕಾಣಬೇಕು, ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸವಾಲುಗಳು ಬೆಟ್ಟದಷ್ಟಿದ್ದರೂ, ಸಾಧನೆಗೆ ಪೂರಕವಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುವುದಾಗಿ ವಿವರಿಸುತ್ತಾ ಅಲ್ಪಸಂಖ್ಯಾತ ವರ್ಗಕ್ಕಿರುವ ವಿದ್ಯಾರ್ಥಿವೇತನದ ಕುರಿತು ವಿವರವಾದ ಮಾಹಿತಿಯನ್ನು ಮುಖ್ಯ ತರಬೇತುಗಾರರಾಗಿ ಆಗಮಿಸಿದ ಕೆ.ಜಿ.ಎನ್ ವಿದ್ಯಾಸಂಸ್ಥೆಯ ಉಪನ್ಯಾಸಕರಾಗಿರುವ ಎ.ಕೆ ನಂದಾವರ ಹೇಳಿದರು.
ಕಾಲೇಜ್ ಕ್ಯಾಂಪಸ್ ಗಳಲ್ಲಿ ಎದುರಾಗುವ ಸಮಸ್ಯೆಗಳನ್ನು & ಅನ್ಯಾಯಗಳನ್ನು ನೈಜ ಸುನ್ನೀ ಆಶಯದೊಂದಿಗೆ, ಉತ್ತಮ ನಡವಳಿಕೆಯೊಂದಿಗೆ ಕಾನೂನಾತ್ಮಕವಾಗಿ ವಿರೋಧಿಸಬೇಕು ಎಂದು ಇನ್ನೋರ್ವ ತರಬೇತುಗಾರರಾಗಿ ಆಗಮಿಸಿದ ಎಂ.ಕೆ ಸಿನಾನ್ ಸಖಾಫಿ ಅಜಿಲಮೊಗರು ರವರು ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಈಸ್ಟ್ ಝೋನ್ ಸದಸ್ಯರಾದ ಸಿದ್ದೀಕ್ ಜಿ.ಎಚ್ ಪರಪ್ಪು, ಕಟ್ಟಡದ ಮಾಲಿಕರಾದ ಇಸ್ಮಾಯಿಲ್ ಹಾಜೀ, ಬೆಳ್ತಂಗಡಿ ಡಿವಿಶನ್ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ, ಡಿವಿಶನ್ ಸದಸ್ಯ ಇಸಾಕ್ ಅಳದಂಗಡಿ, ಸೆಕ್ಟರ್ ಕಾರ್ಯದರ್ಶಿ ಫಯಾಝ್ ಗೇರುಕಟ್ಟೆ, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಜಲಾಲ್ ಸುನ್ನತ್ ಕೆರೆ, ಕೋಶಾಧಿಕಾರಿ ನಾಸರ್ ಸುನ್ನತ್ ಕೆರೆ ಹಾಗೂ ಸುನ್ನತ್ ಕೆರೆ ಶಾಖಾ ಅಧ್ಯಕ್ಷ ಇಸಾಕ್ ಸುನ್ನತ್ ಕೆರೆ ಉಪಸ್ಥಿತರಿದ್ದರು.
ಸಿದ್ದೀಕ್ ಜಾರಿಗೆಬೈಲು ಸ್ವಾಗತಿಸಿ, ಇಸಾಕ್ ಸುನ್ನತ್ ಕೆರೆ ವಂದಿಸಿದರು.