janadhvani

Kannada Online News Paper

ಅಲ್ಪಸಂಖ್ಯಾತರಿಗೆ ದೂರು ದಾಖಲಿಸಲು ಆನ್‌ಲೈನ್ ಸಿಸ್ಟಂ

ಬೆಂಗಳೂರು: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಿಂದ ಅಲ್ಪಸಂಖ್ಯಾತರ ಸಮುದಾಯದವರಿಗಾಗಿ ಆನ್‌ಲೈನ್ ಕಂಪ್ಲೇಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂನ್ನು ರೂಪಿಸಿದೆ.

ಅಲ್ಪಸಂಖ್ಯಾತರ ಸಮುದಾಯದವರು ಯಾವುದೇ ವೈಯಕ್ತಿಕ ದೂರುಗಳು ಅಥವಾ ಕುಂದುಕೊರತೆ ಅನುಭವಿಸಿದ್ದಲ್ಲಿ ಆಯೋಗದ #ವೆಬ್‌ಸೈಟ್ www.ncm.nic.in ಆನ್‌ಲೈನ್ ಪೋರ್ಟಲ್‌ನಲ್ಲಿ ತಮ್ಮ ದೂರುಗಳನ್ನು ದಾಖಲಿಸಬಹುದು ಮತ್ತು Unique ID ಮುಖಾಂತರ ಅರ್ಜಿದಾರರ ದೂರುಗಳ ಸ್ಥಿತಿ-ಗತಿ ಕುರಿತು ಮಾಹಿತಿಯನ್ನು ಪಡೆಯಬಹುದು ಎಂದು #ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.