janadhvani

Kannada Online News Paper

SSF ಕುಪ್ಪೆಪದವು ಶಾಖೆ ವತಿಯಿಂದ ಧ್ವಜ ದಿನಾಚರಣೆ

SSF ಕುಪ್ಪೆಪದವು ಶಾಖೆ ವತಿಯಿಂದ ಧ್ವಜ ದಿನ ಕಾರ್ಯಕ್ರಮವು ದಿನಾಂಕ 19-09-2020 ಶನಿವಾರದಂದು ಶಾಖಾ ಅಧ್ಯಕ್ಷರ ಮನೆ ವಠಾರದಲ್ಲಿ ಅಧ್ಯಕ್ಷರ ನೇತೃತ್ವದಲ್ಲೇ ನಡೆಯಿತು.

ಕಾರ್ಯಕ್ರಮದಲ್ಲಿ ಅಝೀಮ್ ಮುಸ್ಲಿಯಾರ್ ಕುಪ್ಪೆಪದವುರವರು ದು‌ಆ ಹಾಗೂ ಪ್ರಾಸ್ತಾವಿಕ ಭಾಷಣಗೈದರು. ಎಸ್,ಎಸ್,ಎಫ್ಫಿನ ಕಾರ್ಯಾಚರಣೆಯ ಅವಶ್ಯಕತೆ ಏನು ಎಂಬುವುದನ್ನು ಭಾಷಣದಲ್ಲಿ ಒತ್ತಿ ಹೇಳಿದರು.

ಮಾತ್ರವಲ್ಲದೆ ಅಶ್ರಫ್ ಅಡ್ಡೂರ್‌ರಂತಹ ನಿಷ್ಕಳಂಕ ಕಾರ್ಯಕರ್ತರನ್ನು ಉಸ್ತಾದರ ಚುಟುಕು ಮಾತುಗಳಲ್ಲಿ ಅನುಸ್ಮರಿಸಿದರು. ಕಾರ್ಯಕ್ರಮದಲ್ಲಿ ನಮ್ಮಿಂದ ಅಗಲಿದ ಉಲಮಾ ನೇತಾರರು ಹಾಗೂ ಕಾರ್ಯಕರ್ತರ ಮೇಲೆ ತಹ್ಲೀಲ್‌ಗಳನ್ನು ಹೇಳಿ ದು‌ಆ ಮಾಡುವುದರೊಂದಿಗೆ ಶೈಖುನಾ ತಾಜುಲ್ ಪುಖ‌ಹಾ‌ಅ್ ಬೇಕಲ್ ಉಸ್ತಾದರ ಅರೋಗ್ಯ ಸುಧಾರಣೆಗಾಗಿ ಪ್ರತ್ಯೇಕ ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಖಾ ಕಾರ್ಯದರ್ಶಿ A,K,ಜೀಲಾನಿ, ಉಪಾಧ್ಯಕ್ಷರಾದ ಶಬೀರ್ ಆಚರಿಜೋರ,ಜೊತೆ ಕಾರ್ಯದರ್ಶಿ ಮುಖದ್ದಿಮ್ ನೇಲಚ್ಚಿಲ್ ಹಾಗೂ ಇನ್ನಿತರ ಸಾಂಘಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು‌.ಕೊನೆಯಲ್ಲಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.