janadhvani

Kannada Online News Paper

ಸಾಮಾಜಿಕ ಜಾಲತಾಣ ಒಳಿತು- ಕೆಡುಕು: ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟ

ಸುಂಟಿಕೊಪ್ಪ, ಆಗಸ್ಟ್. 31: ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ – ಕೊಡಗು ವತಿಯಿಂದ ಸಾಮಾಜಿಕ ಜಾಲತಾಣ; ಒಳಿತು – ಕೆಡುಕು ಎಂಬ ವಿಷಯದ ಕುರಿತು ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಹಾರೀಸ್ ಕೊಡ್ಲಿಪೇಟೆ ಪ್ರಥಮ ಹಾಗೂ ಎಂ ಎನ್ ಮಾನ್ಸಿ ಕಾವೇರಮ್ಮ ದ್ವೀತಿಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಅಸೀಬ ಭಾನು ಕಲ್ಲಡ್ಕ, ಜಸೀಲ ಕೊಡ್ಲಿಪೇಟೆ, ರಂಜಿತ ಮೈಸೂರು, ಶಹನಾಝ್ ಕೊಳಕೇರಿ ಅವರ ಪ್ರಬಂಧ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.

ಆಗಸ್ಟ್ 31ರಂದು ಸುಂಟಿಕೊಪ್ಪ ದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಕಾರ್ಯದರ್ಶಿ ಶುಹೈಬ್ ಫೈಝಿ ಕೊಳಕೇರಿ ವಿಜೇತರ ಹೆಸರನ್ನು ಘೋಷಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಪ ಖಾಝಿ ಶೈಖುನಾ ಅಬ್ದುಲ್ಲ ಫೈಝಿ, ಮಾಜಿ ಶಾಸಕರಾದ ಕೆ. ಎಂ ಇಬ್ರಾಹಿಂ ಮಾಸ್ಟರ್, ಉಮರ್ ಫೈಝಿ, ಇಕ್ಬಾಲ್ ಉಸ್ತಾದ್, ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಕ್ ದಾರಿಮಿ ಹಾಗೂ ಜಿಲ್ಲಾ ಸಮಿತಿಯ ನೇತಾರರು, ಧಾರ್ಮಿಕ ಮುಖಂಡರುಗಳು ಭಾಗವಸಿದ್ದರು.

ವಿಜೇತರಿಗೆ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುವುದೆಂದು
ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ- ಕೊಡಗು ಪ್ರಕಟಣೆ ತಿಳಿಸಿದೆ.ಪ್ರಥಮ ಬಹುಮಾನವನ್ನು ಕ್ಲಿಯರ್ ವ್ಯೂ ಆಪ್ಟಿಕಲ್ ನೆಲ್ಲಿಯಹುದಿಕೇರಿ, ದ್ವೀತಿಯ ಬಹುಮಾನವನ್ನು ಬಶೀರ್ ಚೇರಂಭಾಣೆ ಹಾಗೂ ಸಮಾಧಾನಕರ ಬಹುಮಾನಗಳನ್ನು ಅಬ್ದುಲ್ ರಝಾಕ್ ಫೈಝಿ ಸೌದಿ ಅರೇಬಿಯಾ ರವರು ಪ್ರಾಯೋಜಿಸಿದ್ದಾರೆ.

error: Content is protected !! Not allowed copy content from janadhvani.com