janadhvani

Kannada Online News Paper

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಆಯುಷ್ಮಾನ್ ಕಾರ್ಡ್ ಅಭಿಯಾನ

ಬೆಳ್ತಂಗಡಿ ಆ 25 : ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಭಾರತ ಸರ್ಕಾರದ ಆರೋಗ್ಯ ಯೋಜನೆಯಾಗಿರುವ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ನೋಂದಾವಣೆ ಅಭಿಯಾನವು ಮುರ ಗ್ಲೋಬಲ್ ಫೌಂಡೇಶನ್ ಕಛೇರಿಯಲ್ಲಿ ನಡೆಯಿತು.

ಎಸ್ಡಿಪಿಐ ನಾವೂರು ಬ್ರಾಂಚ್ ಅಧ್ಯಕ್ಷ ‌ಬಶೀರ್ ಕಳಸ ಅಧ್ಯಕ್ಷತೆ ವಹಿಸಿದ್ದರು. ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಆಲ್ಫೋನ್ಸ್ ಫ್ರಾಂಕೋ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾಧ್ಯಕ್ಷ ಜನಾಬ್ ಹೈದರ್ ನೀರ್ಸಾಲ್, ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ, ತಾಲೂಕು ಸಮಿತಿ ಸದಸ್ಯ ಅಶ್ರಫ್ ಕಟ್ಟೆ, ಗ್ಲೋಬಲ್ ಫೌಂಡೇಷನ್ ಅಧ್ಯಕ್ಷ ಅಬ್ದುಲ್ ಖಾದರ್ ನಾವೂರು, ಸ್ನೇಹ ಸ್ವಸಹಾಯ ಸಂಘ ನಾವೂರು ಪ್ರಧಾನ ಕಾರ್ಯದರ್ಶಿ ಸಿನಾನ್ ಮುರ ಮುಂತಾದವರು ಉಪಸ್ಥಿತರಿದ್ದರು.

ಶಿಬಿರದಲ್ಲಿ 320 ಮಂದಿ ಸಾರ್ವಜನಿಕರು ಹೊಸ ಕಾರ್ಡ್ ನೋಂದಾವಣೆ ಮಾಡಿಕೊಂಡರು. ಎಸ್ಡಿಪಿಐ ನಾವೂರು ಮತ್ತು ಗ್ಲೋಬಲ್ ಫೌಂಡೇಶನ್ ಹಮ್ಮಿಕೊಂಡ ಈ ಕಾರ್ಯಕ್ರಮವು ಸಾರ್ವಜನಿಕರಿಂದ ಬಾರೀ ಪ್ರಶಂಸೆಗೆ ಪಾತ್ರವಾಯಿತು