ಮಂಗಳೂರು ಅ 22.ಜಿಲ್ಲೆಯ ಹಲವು ಕಡೆ ಸಮಾಜದ್ರೋಹಿ ಶಕ್ತಿಗಳು ಕೋಮು ಪ್ರಚೋದಕ ಕುತಂತ್ರಗಳನ್ನು ನಿರಂತರವಾಗಿ ಮಾಡುತ್ತಿದ್ದು ಕೂಡಲೇ ಜಿಲ್ಲಾಡಳಿತವು ಸೂಕ್ತ ವಾದ ಕಾನೂನು ಕ್ರಮಗಳ ಮೂಲಕ ವಿಧ್ವಂಸಕ ಶಕ್ತಿ ಗಳನ್ನು ಮಟ್ಟಹಾಕಬೇಕೆಂದು ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷರಾದ ಕೆ ಪಿ ಅಬ್ದುಲ್ ರಹಮಾನ್ ತಬೂಕು ದಾರಿಮಿ ಕರೆ ನೀಡಿದರು.
ಕಳೆದ ವಾರ ಶ್ರಂಗೇರಿಯಲ್ಲಿ ಇದೇ ತರದ ಕೃತ್ಯ ನಡೆದಿದ್ದು ಪೋಲೀಸ್ ಇಲಾಖೆಯು ಸೂಕ್ತ ರೀತಿಯಲ್ಲಿ ಕಾನೂನು ಕೈಗೊಂಡ ಕಾರಣ ಸಂಭವಿಸಬಹುದಾದ ಅನಾಹುತವನ್ನು ತಡೆದಿದ್ದು ಶ್ಲಾಘನೀಯ ಎಂದು ಅವರು ಹೇಳುವುದರ ಜೊತೆಗೆ ಮಂಗಳೂರಿನ ಕೃತ್ಯವನ್ನು ಬಲವಾಗಿ ಖಂಡಿಸಿರುತ್ತಾರೆ.
ಮಂಗಳೂರಿನ ಹೃದಯ ಭಾಗದಲ್ಲಿರುವ ಅಲ್ಪಸಂಖ್ಯಾತರ ಭವನವನ್ನು ಮೊನ್ನೆ ಹಾಳುಗೆಡವಿದ ಸಮಾಜದ್ರೋಹಿಗಳು ಇಂದು ಪಂಪ್ ವೆಲ್ ನಲ್ಲಿರುವ ಪ್ರತಿಷ್ಠಿತ ತಖ್ವಾ ಮಸೀದಿಗೆ ಬಾಟಲಿಗಳನ್ನು ಎಸೆದು ದಾಂಧಲೆ ಮಾಡಿದ್ದು ಕೋಮುಪ್ರಚೋದಕ ಕೃತ್ಯಗಳಲ್ಲಿ ತೊಡಗಿರುತ್ತಾರೆ. ಇಂತಹ ನೀಚ ಕೃತ್ಯಗಳನ್ನು ಕಾನೂನಾತ್ಮಕ ಸೂಕ್ತ ಕ್ರಮಗಳ ಮೂಲಕ ಕೂಡಲೇ ಮಟ್ಟ ಹಾಕಿ ಜಿಲ್ಲೆಯ ಸ್ವಾಸ್ಥ್ಯ ಕಾಪಾಡಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ತಬೂಕು ದಾರಿಮಿ ಜಿಲ್ಲಾಡಳಿತ ಮತ್ತು ಸರಕಾರವನ್ನು ಒತ್ತಾಯಿಸಿದ್ದಾರೆ.