ಎಸ್ಸೆಸ್ಸಫ್ ಗುರುವಾಯನಕೆರೆ ಸೆಕ್ಟರ್ ವತಿಯಿಂದ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಯೋಗದೊಂದಿಗೆ, ಎಸ್ಸೆಸ್ಸಫ್ ದ.ಕ ಜಿಲ್ಲಾ ಬ್ಲಡ್ ಸೈಬೊ ಇದರ 171 ನೇ ರಕ್ತದಾನ ಶಿಬಿರ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನವು ಆಗಸ್ಟ್ 16 ರಂದು ಮನ್ಶರ್ ಸಂಸ್ಥೆ ಗೇರುಕಟ್ಟೆ ಇಲ್ಲಿ ನಡೆಯಿತು.
ಪರಪ್ಪು ಜುಮ್ಮಾ ಮಸ್ಜಿದ್ ಖತೀಬ್ ಉಸ್ತಾದರಾದ ಉಮರುಲ್ ಫಾರೂಕ್ ಸಖಾಫಿ ಯವರ ಉದ್ಘಾಟನೆಯೊಂದಿಗೆ ಚಾಲನೆಗೊಂಡ ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷರಾದ ಜಮಾಲುದ್ದೀನ್ ಮದನಿ ರವರ ಅಧ್ಯಕ್ಷತೆ ವಹಿಸಿದ್ದರು.
ಭವ್ಯ ಭಾರತದ ಸಹೋದರತೆಯ ಕನಸುಗಳನ್ನು ಈಡೇರುಸುವಲ್ಲಿ ನಾವು ಮುಂದಾಗಬೇಕು ಎಂದು ಎಸ್ಸೆಸ್ಸಫ್ ದ.ಕ ಜಿಲ್ಲಾ ಕೋಶಾಧಿಕಾರಿ ಮಹಮ್ಮದ್ ಅಲೀ ತುರ್ಕಳಿಕೆ ಸಂದೇಶ ಭಾಷಣ ಮಾಡುತ್ತಾ ವಿವರಿಸಿದರು.ರಕ್ತದ ಅವಶ್ಯಕತೆ ಬಂದಾಗ ಯಾವುದೇ ಜಾತಿ ಧರ್ಮಗಳನ್ನು ನೋಡದೆ ಕೇವಲ ರಕ್ತದ ಗುಂಪುನ್ನು ಮಾತ್ರ ಪರಿಗಣಿಸುತ್ತಾರೆ, ಹಾಗಾಗಿ ರಕ್ತದಾನ ಅತೀ ಶ್ರೇಷ್ಠ ದಾನ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಸ.ಪ.ಪೂರ್ವ ಕಾಲೇಜು ಗೇರುಕಟ್ಟೆ ಇಲ್ಲಿಯ ಉಪನ್ಯಾಸಕಾರಾಗಿರುವ ಕೇಶವ ಬಂಗೇರ ರವರು ಶುಭ ಹಾರೈಸುತ್ತಾ ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸಫ್ ರಾಜ್ಯಾಧ್ಯಕ್ಷರು ಮತ್ತು ಮನ್ಶರ್ ಸಂಸ್ಥೆಯ ಚೆಯ್ಯರ್ ಮನ್ ಅಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ರವರು ಶುಭ ಹಾರೈಸಿದರು. ಎಸ್ಸೆಸ್ಸಫ್ ದ.ಕ ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ, ಜಿಲ್ಲಾ ಸದಸ್ಯರಾಗಿರುವ ಇಕ್ಬಾಲ್ ಮಾಚಾರ್, ದ.ಕ ಬ್ಲಡ್ ಸೈಬೋ ಇದರ ವೈಸ್ ಚೆಯ್ಯರ್ ಮನ್ ನವಾಝ್ ಸಖಾಫಿ ಅಡ್ಯಾರ್ ಪದವು, ಝೋನ್ ಅಧ್ಯಕ್ಷರಾಗಿರುವ ಅಯ್ಯೂಬ್ ಮಹ್ಳರಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿರುವ ಕರೀಂ ಗೇರುಕಟ್ಟೆ, ಮನ್ಶರ್ ಪ್ಯಾರಮೆಡಿಕಲ್ ಪ್ರಾಂಶುಪಾಲರಾಗಿರುವ ಹೈದರ್ ಸರ್ ಮರ್ದಾಳ, ಜ್ಯೋತಿ ಶಾಮಿಯಾನ ಇದರ ಮಾಲಕರಾದ ಹರೀಶ್ ಕುಮಾರ್, SMA & SJM ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ NM ಶರೀಫ್ ಸಖಾಫಿ ನೆಕ್ಕಿಲ್ ಹಾಗೂ ಸುದ್ದಿ ಬಿಡುಗಡೆ ಬೆಳ್ತಂಗಡಿ ಪ್ರತಿನಿಧಿ ಕೆ.ಎನ್ ಗೌಡ, ಮನ್ಶರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ರಶೀದ್ ಕುಪ್ಪೆಟ್ಟಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸಫ್ ದ.ಕ ಬ್ಲಡ್ ಸೈಬೋ ಸಂಚಾಲಕರಾಗಿರುವ ಕರೀಂ ಕದ್ಕಾರ್,ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಬೆರ್ಕಳ, ಈಸ್ಟ್ ಝೋನ್ ಸದಸ್ಯರಾಗಿರುವ ಸಿದ್ದೀಕ್ ಪರಪ್ಪು, ಬೆಳ್ತಂಗಡಿ ಡಿವಿಶನ್ ಕಾರ್ಯದರ್ಶಿ ಶರೀಫ್ ನಾವೂರು, SMA ರಾಜ್ಯ ಉಪಾಧ್ಯಕ್ಷರಾದ ಎ.ಕೆ ಅಹ್ಮದ್ ಎರುಕಡುಪು, ಡಿವಿಶನ್ ಉಪಾಧ್ಯಕ್ಷರಾದ ಕರೀಂ ಸಖಾಫಿ, SYS ನಾಯಕರಾದ ಹಾಫಿಝ್ ಹನೀಫ್ ಮಿಸ್ಬಾಹಿ & ಅಬೂಸ್ವಾಲಿಹ್ ಪರಪ್ಪು ಇನ್ನಿತರ SYS SSF ಸಂಘಟನಾ ಮತ್ತು ರಾಜಕೀಯ ನಾಯಕರು ಉಪಸ್ಥಿತರಿದ್ದರು.
135 ಯುನಿಟ್ ರಕ್ತ ಸಂಗ್ರಹಿಸುವ ಮೂಲಕ ಬೆಳ್ತಂಗಡಿ ತಾಲೂಕಿನ ಮಟ್ಟದಲ್ಲಿ ಅತ್ಯಂತ ಯಶಸ್ವಿ ಕ್ಯಾಂಪ್ ಇದಾಗಿದೆ ಮತ್ತು ಸುಮಾರು 120 ಫಲಾನುಭವಿಗಳು ಆಯುಷ್ಮಾನ್ ಕಾರ್ಡ್ ನೋಂದಾಣಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗುರುವಾಯನಕೆರೆ ವ್ಯಾಪ್ತಿಯ ಮೂರು ಎಸ್ಸೆಸ್ಸಲ್ಸಿ ಸಾಧಕರಿಗೆ ಹಾಗೂ ನೂತನ ಮಾದರಿಯ ವೈಜ್ಞಾನಿಕ ಉತ್ಪನ್ನವನ್ನು ಪರಿಚಯಿಸಿದ ಸುನ್ನತ್ ಕೆರೆಯ ಝಕರಿಯ್ಯಾ ಎಂಬ ವಿದ್ಯಾರ್ಥಿಗೆ ಸನ್ಮಾನ ಮಾಡಲಾಯಿತು.
ಸೆಕ್ಟರ್ ಕಾರ್ಯದರ್ಶಿ ಫಯಾಝ್ ಗೇರುಕಟ್ಟೆ ಸ್ಚಾಗತಿಸಿ, ನಾಸರ್ ಜಾರಿಗೆಬೈಲು ವಂದಿಸಿದರು
ಸಿದ್ದೀಕ್ ಜಾರಿಗೆಬೈಲು ಕಾರ್ಯಕ್ರಮ ನಿರೂಪಿಸಿದರು.