ಉಳ್ಳಾಲ:-ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ , ಬ್ಲಡ್ ಸೈಬೋ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ 170 ನೇ ಸ್ವಯಂ ಪ್ರೇರಿತ ರಕ್ತದಾನ ಶಿಬಿರವೂ ಕಣಚೂರು ಆಸ್ಪತ್ರೆ ದೇರಳಕಟ್ಟೆ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ ಕ ಜಿಲ್ಲಾ ಅಧ್ಯಕ್ಷರಾದ ಇಬ್ರಾಹಿಮ್ ಸಖಾಫಿ ಸೆರ್ಕಲ, ಜಿಲ್ಲಾ ಬ್ಲಡ್ ಸೈಬೊ ಜಿಲ್ಲಾ ಸಂಚಾಲಕರಾದ ಕರೀಂ ಕದ್ಕಾರ್, ಉಳ್ಳಾಲ ಡಿವಿಶನ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು ಎಸ್, ಉಳ್ಳಾಲ ಡಿವಿಷನ್ ಬ್ಲಡ್ ಸೈಬೋ ಕನ್ವೀನರ್ ಅಲ್ತಾಫ್ ಶಾಂತಿಬಾಗ್, ಉಳ್ಳಾಲ ಡಿವಿಷನ್ ಉಪಾಧ್ಯಕ್ಷರಾದ ಇಸ್ಮಾಯಿಲ್ ಕೆ ಸಿ ನಗರ, ಉಳ್ಳಾಲ ಡಿವಿಷನ್ ಕೋಶಾದಿಕಾರಿ ಸಿರಾಜುದ್ದೀನ್ ಎ ಎಚ್, ಡಿವಿಷನ್ ಕಾರ್ಯದರ್ಶಿಗಳಾದ ಅನ್ವೀಝ್, ಸುಹೈಲ್, ಕ್ಯಾಂಪಸ್ ಕಾರ್ಯದರ್ಶಿ ಮೊಹಮ್ಮದ್ ಆಶಿಕ್, ಡಿವಿಷನ್ ಕ್ಯೂ ಟೀಮ್ ಕನ್ವಿನರ್ ಶಫೀಕ್ ಅಹ್ಸನಿ, ಡಿವಿಷನ್ ಸದಸ್ಯರಾದ ಸಫ್ವಾನ್ ಕಿನ್ಯಾ ಸಹಿತ ಹಲವಾರು ನಾಯಕರು ಭಾಗವಹಿಸಿದ್ದರು.