ಬೆಂಗಳೂರು:ಕೊರೋನಾ ಕಾರಣ ಶಾಲಾಕಾಲೇಜು ಬಂದ್ ಮಾಡಿರುವುದರಿಂದ ಆನ್‌ಲೈನ್ ಮತ್ತು ಆಫ್ಲೈನ್ ಕ್ಲಾಸ್ ಮೊರೆ ಹೋಗಿದೆ ಶಿಕ್ಷಣ ಇಲಾಖೆ. ಇದೀಗ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಪಾಠ ಆರಂಭವಾಗಿದೆ.
ಕೋವಿಡ್ 19 ಹಿನ್ನೆಲೆ ಶೈಕ್ಷಣಿಕ ಚಟುವಟಿಕೆ ಆರಂಭ ಆಗದ ಹಿನ್ನೆಲೆ ಯೂ ಟ್ಯೂಬ್ ಮೂಲಕ ಪ್ರೀ ರೆಕಾರ್ಡೆಡ್ ಕ್ಲಾಸ್ ನಡೆಸಲಾಗುತ್ತಿದೆ. ಇಂದಿನಿಂದ ಯೂಟ್ಯೂಬ್ ತರಗತಿಗಳು ಆರಂಭವಾಗಿದ್ದು, ಪ್ರತಿ ದಿನ 45 ನಿಮಿಷಗಳ 4 ಅವಧಿಯ ತರಗತಿಗಳು ಜರುಗಲಿವೆ. ಪ್ರತಿ ವಿಷಯಕ್ಕೆ ಎರಡು ಅವಧಿ ನಿಗದಿಯಾಗಿದೆ. ಒಂದನೇ ಅವಧಿಯಲ್ಲಿ ವಿಡಿಯೊ ತರಗತಿ, ಎರಡನೇ ಅವಧಿಯಲ್ಲಿ ಈ ತರಗತಿಗೆ ಸಂಬಂಧಿಸಿದ ಸಂದೇಹ ನಿವಾರಣೆ, ನೋಟ್ಸ್, ಬರವಣಿಗೆ ಇರಲಿದೆ.
ಆಯಾ ಕಾಲೇಜಿನ, ಆಯಾ ವಿಷಯಗಳ ಉಪನ್ಯಾಸಕರು ಈ ಬಗ್ಗೆ ನಿಗಾ ವಹಿಸಬೇಕು. ಜಿಲ್ಲಾ ಉಪ ನಿರ್ದೇಶಕರು, ಪ್ರಾಂಶುಪಾಲರ ಹೆಗಲಿಗೆ ಜವಾಬ್ದಾರಿ ನೀಡಲಾಗಿದೆ. ಇವರ ಮೂಲಕ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಲುಪಿಸಿ ಪ್ರತಿ ದಿನ ತರಗತಿಗಳನ್ನು ವೀಕ್ಷಿಸಲು ಪ್ರೇರೇಪಿಸಬೇಕು. ಆಯಾ ಪಾಠಕ್ಕೆ ಸಂಬಂಧಿಸಿದ ನೋಟ್ಸ್‌ಗಳು ಅದೇ ದಿನ ಲಭ್ಯವಾಗಲಿವೆ ಎಂದು ಪಿಯು ಮಂಡಳಿ ಸೂಚಿಸಿದೆ.
ವೇಳಾಪಟ್ಟಿಯಂತೆ ವಿಡಿಯೊ ವೀಕ್ಷಿಸಲು ಸಾಧ್ಯವಾಗದಿದ್ದರೆ ಲಿಂಕ್ ಬಳಸಿ ಬೇರೆ ದಿನಗಳಲ್ಲಿ ಮತ್ತು ಪುನರಾವರ್ತಿತವಾಗಿ ವೀಕ್ಷಿಸಬಹುದು.
https://www.youtube.com/c/dpuedkpucpa ಈ ಯೂಟ್ಯೂಬ್ ಲಿಂಕ್‌ನಲ್ಲಿ ಪಾಠಗಳನ್ನ ಕೇಳಬಹುದು.
ದ್ವಿತೀಯ ಪಿಯು ಯೂಟ್ಯೂಬ್ ತರಗತಿಯ ವೇಳಾಪಟ್ಟಿ:
- ಜುಲೈ 23: ಭೌತಶಾಸ್ತ್ರ / ಅಕೌಂಟೆನ್ಸಿ ಭೌತಶಾಸ್ತ್ರ / ಅಕೌಂಟೆನ್ಸಿ (ನೋಟ್ಸ್) ರಸಾಯನಶಾಸ್ತ್ರ / ರಾಜ್ಯಶಾಸ್ತ್ರ ರಸಾಯನಶಾಸ್ತ್ರ / ರಾಜ್ಯಶಾಸ್ತ್ರ (ನೋಟ್ಸ್)
- ಜುಲೈ 24: ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್ ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್ (ನೋಟ್ಸ್) ಗಣಿತ / ಅರ್ಥಶಾಸ್ತ್ರ ಗಣಿತ / ಅರ್ಥಶಾಸ್ತ್ರ (ನೋಟ್ಸ್)
- ಜುಲೈ 25: ಗಣಿತ /ಇತಿಹಾಸ ಗಣಿತ/ಇತಿಹಾಸ (ನೋಟ್ಸ್) ಜೀವಶಾಸ್ತ್ರ/ ಬಿಸಿನೆಟ್ ಸ್ಟಡೀಸ್ ನೋಟ್ಸ್
- ಜುಲೈ 27: ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್ ಕಂಪ್ಯೂಟರ್ ಸೈನ್ಸ್/ ಸಮಾಜಶಾಸ್ತ್ರ ನೋಟ್ಸ್
- ಜುಲೈ 28: ಬೇಸಿಕ್ ಮ್ಯಾಥ್ಸ್/ ಸಮಾಜಶಾಸ್ತ್ರ ನೋಟ್ಸ್ ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್
- ಜುಲೈ 29: ಇಂಗ್ಲಿಷ್ ನೋಟ್ಸ್ ಕನ್ನಡ/ಹಿಂದಿ/ಸಂಸ್ಕೃತ ನೋಟ್ಸ್
- ಜು.30: ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್ ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್
- ಜುಲೈ 31: ಜೀವಶಾಸ್ತ್ರ/ಬಿಸಿನೆಸ್ ಸ್ಟಡೀಸ್ ನೋಟ್ಸ್ ಗಣಿತ/ಅರ್ಥಶಾಸ್ತ್ರ ನೋಟ್ಸ್
- ಆಗಸ್ಟ್ 1: ಗಣಿತ/ಇತಿಹಾಸ ನೋಟ್ಸ್ ಜೀವಶಾಸ್ತ್ರ/ ಬಿಸಿನೆಟ್ ಸ್ಟಡೀಸ್ ನೋಟ್ಸ್
ಈ ಕುರಿತು ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ನಿಗಾ ವಹಿಸಬೇಕು. ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ವಿಷಯವಾರು ಉಪನ್ಯಾಸಕರಿಗೆ ವಿಂಗಡಿಸಿ ಅಪ್ ಲೋಡ್ ಆಗಿರುವ ಪ್ರಿ–ರೆಕಾರ್ಡೆಡ್ ವಿಡಿಯೊ ವೀಕ್ಷಿಸಲು ಸೂಚಿಸಬೇಕು. ಸಂದೇಹಗಳಿದ್ದರೆ ವಾಟ್ಸ್ಆ್ಯಪ್ ಮೂಲಕ ಪರಿಹರಿಸುವಂತೆ ಸೂಚನೆ ನೀಡಲಾಗಿದೆ.






