ಯಾವುದೇ ದೊಡ್ಡ ಖಾಯಿಲೆ ಇಲ್ಲದ ವ್ಯಕ್ತಿಯನ್ನು, ಶಸ್ತ್ರಕ್ರಿಯೆ ನಡೆಸಿ ಕಿಡ್ನಿಯಂತಹಾ ಬೆಲೆಬಾಳುವ ಅಂಗಾಂಗಗಳನ್ನು ಕಿತ್ತು, ಕೊರೋನಾದಿಂದ ಮರಣ ಎಂಬ ಲೇಬಲ್ ನೀಡಿ ಯಾರೂ ಕೂಡ ಮೃತ ವ್ಯಕ್ತಿಯ ಶರೀರವನ್ನು ಪರಿಶೀಲಿಸಲು ಮುಂದಾಗದಂತೆ ಅಂತ್ಯಕ್ರಿಯೆ ನಡೆಸಿದರೆ, ಕೇಳುವವರು ಯಾರು ಎಂದು ಜನರು ಸಂದೇಹ ವ್ಯಕ್ತಪಡಿಸಿದ್ದಾರೆ.
ಮಂಗಳೂರು: ಜನಜೀವನವನ್ನು ಅಸ್ತವ್ಯಸ್ತಗೊಳಿಸಿರುವ ಕೋವಿಡ್ ಮಹಾಮಾರಿಯು ಅನಿಯಂತ್ರಿತವಾಗಿ ಹರಡುತ್ತಲೇ ಇದೆ. ಆಡಳಿತ ಸರ್ಕಾರಗಳು ಆರ್ಥಿಕ ಸಮಸ್ಯೆಯನ್ನು ಮುಂದಿಟ್ಟು ಲಾಕ್ಡೌನ್ ಸಡಿಲಿಕೆ ಮಾಡಿದೆ.
ಸೋಂಕಿತರ ಸಂಖ್ಯೆ ದೈನಂದಿನ ಏರುತ್ತಲೇ ಇದ್ದು, ಜನರು ಸ್ವಯಂ ಘೋಷಿತ ಲಾಕ್ಡೌನ್ ನಡೆಸಿ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೋವಿಡ್ ಚಿಕಿತ್ಸೆಗೆ ಯಾವುದೇ ಔಷಧಿಯನ್ನು ಕಂಡು ಹಿಡಿಯಲಾಗಿಲ್ಲ, ಆದರೂ ಕೊರೋನಾ ಚಿಕಿತ್ಸೆಗೆ ಸರಕಾರವು ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಿದೆ.
ಈ ಅನುಮತಿಯ ಮರೆಯಲ್ಲಿ ಮಂಗಳೂರಿನ ಬಹುಮಹಡಿ ಐಶಾರಾಮಿ ಆಸ್ಪತ್ರೆಗಳು ಬಡಜನರ ರಕ್ತಹೀರಲು ಮುಂದಾಗಿದೆ. ಯಾವುದೇ ಸಣ್ಣ ಖಾಯಿಲೆಗೆಂದು ಆಸ್ಪತ್ರೆಗೆ ಭೇಟಿ ನೀಡಿದರೆ, ಕೊರೋನಾ ಟೆಸ್ಟ್ ಹೆಸರಿನಲ್ಲಿ ಆಸ್ಪತ್ರೆಯ ಒಳರೋಗಿಯಾಗಿ ದಾಖಲಿಸಿ, ವಾರಗಳಷ್ಟು ದಿನ ಯಾವುದೇ ವೈದ್ಯಕೀಯ ಸೇವೆಯನ್ನೂ ನೀಡದೆ,ಲಕ್ಷಾಂತರ ರೂಪಾಯಿಯ ಬಿಲ್ಲನ್ನು ನೀಡಿ ಆಸ್ಪತ್ರೆಯಿಂದ ಕಳಿಸಲಾಗುತ್ತಿದೆ.
ಲಾಕ್ಡೌನ್ ಸಮಯಗಳಲ್ಲಿ ಮುಚ್ಚಲ್ಪಟ್ಟಿದ್ದ ಈ ಆಸ್ಪತ್ರೆಗಳು ಸಿಬ್ಬಂದಿಗಳ ವೇತನ ನೀಡಲು, ಕೋವಿಡ್ ಹೆಸರಿನಲ್ಲಿ ಬಡ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಅದೂ ಅಲ್ಲದೆ, ಯಾವುದೇ ಖಾಯಿಲೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದರೂ ಕೋರೋನಾ ಪಟ್ಟ ನೀಡಲಾಗುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡಲು ಜನರು ಹಿಂಜರಿಯುತ್ತಿದ್ದಾರೆ.
ಯಾವುದೇ ಮರಣವನ್ನು ಕೊರೋನಾ ಮರಣವೆಂದು ಬಿಂಬಿಸಿ, ಅಂತ್ಯಕ್ರಿಯೆಯಿಂದ ಜನರನ್ನು ದೂರೀಕರಿಸಲಾಗುತ್ತಿದೆ. ಅಂತ್ಯಕ್ರಿಯೆ ಬಳಿಕ ಕೊರೋನಾ ನೆಗಟಿವ್ ಫಲಿತಾಂಶ ನೀಡಿ ಕುಟುಂಬಿಕರನ್ನು ದುಃಖಿತರನ್ನಾಗಿ ಮಾಡಲಾಗುತ್ತಿದೆ.
ಅದೂ ಅಲ್ಲದೇ, ಯಾವುದೇ ದೊಡ್ಡ ಖಾಯಿಲೆ ಇಲ್ಲದ ವ್ಯಕ್ತಿಯನ್ನು, ಶಸ್ತ್ರಕ್ರಿಯೆ ನಡೆಸಿ ಕಿಡ್ನಿಯಂತಹಾ ಬೆಲೆಬಾಳುವ ಅಂಗಾಂಗಗಳನ್ನು ಕಿತ್ತು, ಕೊರೋನಾದಿಂದ ಮರಣ ಎಂಬ ಲೇಬಲ್ ನೀಡಿ ಯಾರೂ ಕೂಡ ಮೃತ ವ್ಯಕ್ತಿಯ ಶರೀರವನ್ನು ಪರಿಶೀಲಿಸಲು ಮುಂದಾಗದಂತೆ ಅಂತ್ಯಕ್ರಿಯೆ ನಡೆಸಿದರೆ, ಕೇಳುವವರು ಯಾರು ಎಂದು ಜನರು ಸಂದೇಹ ವ್ಯಕ್ತಪಡಿಸಿದ್ದಾರೆ.
ಈ ನಿಟ್ಟಿನಲ್ಲಿ, ರೋಗಿಗಳನ್ನು ಗ್ರಾಹಕರಂತೆ ಕಂಡು, ವಾಣಿಜ್ಯೋದ್ಯಮಕ್ಕಿಳಿದಿರುವ ಖಾಸಗಿ ಆಸ್ಪತ್ರೆಗಳ ವಿರುದ್ದ #NoMoreCovidScam,
#CovidBillKills ಹ್ಯಾಶ್ ಟ್ಯಾಗ್ ಬಳಸಿ ಟ್ವಿಟರ್ ನಲ್ಲಿ ಅಭಿಯಾನ ನಡೆಯುತ್ತಿದೆ. ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಲಾಗುತ್ತಿದೆ. ಸರ್ಕಾರ ಎಚ್ಚೆತ್ತು ಕ್ರಮ ಕೈಗೊಳ್ಳದಿದ್ದರೆ ,ಭವಿಷ್ಯದಲ್ಲಿ ಮತ್ತಷ್ಟು ಬೆಲೆ ತೆರಬೇಕಾದೀತು ಎಂದು ಸರಕಾರವನ್ನು ಎಚ್ಚರಿಸಲಾಗಿದೆ.
ಈಗಾಗಲೇ ಕರ್ನಾಟಕ ಟ್ರೆಂಡ್ ಲಿಸ್ಟ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಮುಂದುವರೆಯುತ್ತಿರುವ ಜನರ ಧ್ವನಿ, ಇಂಡಿಯಾ ಟ್ರೆಂಡ್ ಲಿಸ್ಟ್ ನಲ್ಲೂ ಸಾಕಷ್ಟು ಶಬ್ಧ ಮಾಡುತ್ತಾ ಟ್ರೆಂಡ್ ಲಿಸ್ಟ್ ನಲ್ಲಿ ಸ್ಥಾನ ಪಡೆದಿದೆ.