ಇಸ್ಹಾಕ್ ಸಿ.ಐ.ಫಜೀರ್.
ಕೆಸಿಎಫ್ ನಿಂದ ಇಂದು ದಮ್ಮಾಂ-ಮಂಗಳೂರು ವಿಶೇಷ ವಿಮಾನ.
“ಮರುಭೂಮಿಯಲ್ಲೊಂದು ನೆರಳು” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಚರಿಸುತ್ತಿರುವ ಅನಿವಾಸಿ ಕನ್ನಡಿಗರ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF)ಬೆರಳೆಣಿಕೆಯ ವರ್ಷಗಳಲ್ಲಿ ಕಡಲಾಚೆಯ ಕನಸಿನ ಲೋಕದಲ್ಲಿ ನೊಂದ ಬೆಂದ ಅನಿವಾಸಿ ಭಾರತೀಯರಿಗೆ ಜಾತಿ ಧರ್ಮ ನೋಡದೆ ಅದ್ವಿತೀಯ ಸೇವೆಯನ್ನು ಮಾಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.
ಪ್ರತಿವರ್ಷ ರಮಳಾನ್ ತಿಂಗಳು ಕೊನೆಗೊಳ್ಳುವಾಗ ಹಜ್ಜಾಜಿಗಳ ಸೇವೆಗಾಗಿ ಸನ್ನದ್ಧಗೊಳ್ಳುವ ಸೌದಿ ಅರೇಬಿಯಾ ಕೆಸಿಎಫ್ ರಾಷ್ಟ್ರೀಯ ಸಮಿತಿ ಈ ಬಾರಿ ಕೊರೋನ ಅಟ್ಟಹಸದಿಂದ ಅ ಮಹತ್ವಾಕಾಂಕ್ಷೆಯ ಯೋಜನೆ,ಯೋಚನೆಯಿಂದ ಪ್ರತಿವರ್ಷದಂತೆ ದೊಡ್ಡ ಮಟ್ಟದ ಸೇವೆಯಿಂದ ಹಿಂದೆ ಸರಿಯಬೇಕಾಯಿತು.
ಆದರೂ ನಿರುತ್ಸಾಹಗೊಳ್ಳದ ಕೆಸಿಎಫ್ ಕಾರ್ಯಕರ್ತರು ಕಳೆದ ಕೆಲವು ತಿಂಗಳಿನಿಂದ ಕೊರೋನದ ಅಟ್ಟಹಾಸಕ್ಕೆ ಸಿಲುಕಿ ಕೆಲಸ ಕಳೆದುಕೊಂಡ ಅನಿವಾಸಿ ಕನ್ನಡಿಗರ ಸಮಸ್ಯೆ,ಸಂಕಷ್ಟಗಳನ್ನು ಅರಿತು ಸಂಕಷ್ಟದಲ್ಲಿರುವವರಿಗೆ ಕಿಟ್ ವ್ಯವಸ್ಥೆ ಮಾಡಿದ್ದು ಮಾತ್ರವಲ್ಲದೆ ಇದೀಗ ಚಾರ್ಟಡ್ ವಿಮಾನ ವ್ಯವಸ್ಥೆಯನ್ನು ಮಾಡಿ ಕೆಲಸ ಕಳೆದುಕೊಂಡವರು,ರೋಗಿಗಳು ಗರ್ಭಿಣಿ ಮತ್ತು ಮಕ್ಕಳನ್ನು ಹುಡುಕಿ ಕರ್ನಾಟಕದ (191ಪ್ರಯಾಣಿಕರನ್ನು) ಜನರನ್ನು ಇಂದು ತವರಿಗೆ ಕಳುಹಿಸಿ ಕೊಟ್ಟಿದ್ದಾರೆ.
ಇಂದು ಮುಸ್ಸಂಜೆಯ ಹೊತ್ತಿಗೆ ಸ್ಪೈಸ್ ಏರ್ ಜೆಟ್ ಚಾರ್ಟಡ್ ವಿಮಾನ ಮಂಗಳೂರು ತಲುಪಲಿದೆ .
ಈ ಒಂದು ಸಂಭ್ರಮದ ಯಶಸ್ವಿಗಾಗಿ ಬಿಡುವಿಲ್ಲದ ದುಡಿಮೆಯ ನಡುವೆ ಹಗಲಿರುಳೆನ್ನದೆ ಅವಿರತ ಶ್ರಮ ನಡೆಸಿದ ಕೆಸಿಎಫ್ ರಾಷ್ಟ್ರೀಯ ಸಮಿತಿ ನಾಯಕರುಗಳ ಈ ಅನುಪಮ ಸೇವೆ ಇತಿಹಾಸದ ಪುಟಗಳಲ್ಲಿ ಜೀವಂತವಾಗಿ ಉಳಿಯಲಿದೆ.
ಈ ಸತ್ಕರ್ಮವನ್ನು ಅಲ್ಲಾಹನು ಸ್ವೀಕರಿಸಲಿ.
ಅನಿವಾಸಿ ಭಾರತೀಯರ ಸಂಕಷ್ಟ,ಸಮಸ್ಯೆಗಳಿಗೆ ಸಾಂತ್ವಾನದ ಹೆಬ್ಬಾಗಿಲಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ನೂರಾರು ಕಾಲ ಉಳಿಯಲಿ,ಬಾನೆತ್ತರ ಬೆಳೆಯಲಿ.
ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಗೆ ಮನ ತುಂಬಿದ ಶುಭ ಹಾರೈಕೆಗಳು.