janadhvani

Kannada Online News Paper

ಕೊರೋನಾದಿಂದ ವ್ಯಕ್ತಿ ನಿಧನ: ಅಂತ್ಯಕ್ರಿಯೆಯಲ್ಲಿ KCF,INC ಅಧ್ಯಕ್ಷರಾದ ಡಾ। ಶೈಖ್ ಬಾವ ಭಾಗಿ

ಮಂಗಳೂರು: ಕೊರೋನ ಸೋಂಕಿನಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟ 70 ವರ್ಷ ಪ್ರಾಯದ ವೃದ್ದರೊಬ್ಬರ ಅಂತ್ಯಕ್ರಿಯೆಯು ಬೋಳಾರು ಜಮ್ಮಾ ಮಸ್ಜಿದ್ ದಫನ ಭೂಮಿಯಲ್ಲಿ ನೆರವೇರಿತು.ಈ ಸಂದರ್ಭದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ। ಶೈಖ್ ಬಾವ ಅವರು ಅಂತ್ಯಕ್ರಿಯೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಕೋರೋನಾ ರೋಗದಿಂದ ಮೃತಪಟ್ಟವರನ್ನು ಭಹಿಷ್ಕರಿಸುತ್ತಿರುವ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರುವುದರಲ್ಲಿ ಸಂತೋಷವಿದೆ. ಕೊರೋಣ ಬಗ್ಗೆ ಜಾಗೃತಿ ಪಾಲಿಸಬೇಕೇ ಹೊರತು ಭಯಪಡಬೇಕಾಗಿಲ್ಲ ಎಂದು ಅವರು ವಾರ್ತಾ ಮಾಧ್ಯಮದಲ್ಲಿ ತಿಳಿಸಿದರು. ಮೃತರಿಗೆ ಸಮಾಧಿ ತೋಡುವ ಮೂಲಕ ಶಾಸಕ ಯುಟಿ ಖಾದರ್ ಕೈಜೋಡಿಸಿದರು.