ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿ ನಿರ್ದೇಶನ ಪ್ರಕಾರ ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಯಿತು.ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ರಾದ ಹಾಜಿ ಅಶ್ರಫ್ ಗುಂಡಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ದಲ್ಲಿ ಬಿ.ಜೆ.ಎಮ್.ಕಾರ್ಯದರ್ಶಿ ಕೆ.ಎಮ್ ಮೂಸಾನ್,ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಮಜೀದ್,ಕಾರ್ಯದರ್ಶಿ ಫಸೀಲು,ಎ ಹೆಚ್ ವೈ ಎ.ಮಾಜಿ ಅಧ್ಯಕ್ಷ ಹನೀಫ್ ಎ. ಅರಂತೋಡು ಸ್ವಲಾತ್ ಸಮಿತಿ ಕಾರ್ಯದರ್ಶಿ ಸಂಸುದ್ದೀನ್ ಕೆ.ಯು .ಮೊೖದು ಕುಂಞ ಕುಕ್ಕುಂಬಳ, ಅರಂತೋಡು ಶಾಖೆ ಅಧ್ಯಕ್ಷ ತಾಜುದ್ದೀನ್ ಅರಂತೋಡು,ಕಾರ್ಯದರ್ಶಿ ಜುಬೈರ್,ಸುಳ್ಯ ಟ್ರೆಂಡ್ ಕಾರ್ಯದರ್ಶಿ ಖಾದರ್ ಮೊಟ್ಟೆಂಗಾರ್, ಅಶೀಕ್ ಕುಕ್ಕುಂಬಳ,ನೌಫಲ್ ಕುನ್ನಿಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು .ಶಾಖೆಯ ಕಾರ್ಯದರ್ಶಿ ಜುಬೈರ್ ಸ್ವಾಗತಿಸಿ.ವಂದಿಸಿದರು.






