ದುಬೈ: ಚಾರ್ಟರ್ಡ್ ವಿಮಾನಗಳ ಹೆಸರಲ್ಲಿ ನಡೆಯುವ ವಂಚನಾ ಜಾಲದ ಬಗ್ಗೆ ಎಚ್ಚರ ವಹಿಸುವಂತೆ ದುಬೈನ ಭಾರತೀಯ ದೂತಾವಾಸ ತಿಳಿಸಿದೆ. ಚಾರ್ಟರ್ಡ್ ವಿಮಾನಗಳ ಹೆಸರಲ್ಲಿ ಪ್ರಯಾಣಿಕರನ್ನು ಮೋಸಗೊಳಿಸಲು ಕೆಲವು ಟ್ರಾವೆಲ್ ಏಜೆನ್ಸಿಗಳು ಮತ್ತು ವ್ಯಕ್ತಿಗಳು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಭಾರತೀಯ ದೂತಾವಾಸ ತಿಳಿಸಿದೆ.
ವಿಶೇಷ ವಿಮಾನ ಮೂಲಕ ಭಾರತಕ್ಕೆ ತಲುಪಿಸಲಾಗುವುದು ಮತ್ತು ಇದಕ್ಕಾಗಿ ಮುಂಗಡ ಹಣ ಪಾವತಿಸಬೇಕೆಂದು ಕೆಲವು ಟ್ರಾವೆಲ್ ಏಜೆನ್ಸಿಗಳು ಮತ್ತು ಸಂಬಂಧಿತ ಸಿಬ್ಬಂದಿಗಳು ಪ್ರಯಾಣಿಕರನ್ನು ನಂಬಿಸಿದ್ದಾರೆ.ಊರಿನ ಕ್ವಾರಂಟೇನ್ ಕೇಂದ್ರಕ್ಕೆಂದು ಹೇಳಿ ಪ್ರಯಾಣಿಕರಿಂದ ಹಣ ವಸೂಲು ಮಾಡುತ್ತಿದ್ದಾರೆ.ಇಂತಹಾ ಚಾರ್ಟರ್ಡ್ ವಿಮಾನಗಳಿಗೆ ಭಾರತ ಇನ್ನೂ ಅನುಮತಿ ನೀಡಿಲ್ಲ. ಅನುಮೋದನೆಗಾಗಿ ಚರ್ಚೆಗಳು ನಡೆಯುತ್ತಿವೆ. ಅನುಮೋದನೆ ದೊರೆತ ಕೂಡಲೇ ದೂತಾವಾಸವು ಆ ಬಗ್ಗೆ ಮಾಹಿತಿ ನೀಡಲಿದೆ ಎಂದು ದುಬೈನ ಭಾರತೀಯ ರಾಯಭಾರಿ ಕಚೇರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಇಂತಹ ಹಗರಣಗಳಿಗೆ ಬಲಿಯಾಗದಂತೆ ಎಚ್ಚರಿಸಿದೆ.