ಮಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಜನ ಸಾಮಾನ್ಯರು, ಕೆಲಸವಿಲ್ಲದೆ, ವೇತನವಿಲ್ಲದೆ, ಒಪ್ಪೊತ್ತಿನ ಊಟಕ್ಕೂ ಕೂಡ ಪರದಾಡುವ ಪರಿಸ್ತಿಥಿಯಲ್ಲಿ ‘ಮೆಸ್ಕಾಂ’ ಹಗಲು ದರೋಡೆ ದಂಧೆಗೆ ಇಳಿದಿರುವುದು ಅಮಾನವೀಯ ಕೃತ್ಯವಾಗಿದೆ.
ಎಪ್ರಿಲ್ ಒಂದು ತಿಂಗಳಲ್ಲಿ ರೀಡಿಂಗ್ ಗೆ ಬಾರದೆ ಮೇ ತಿಂಗಳಿನಲ್ಲಿ ರೀಡಿಂಗ್ ಮಾಡಿ ಎರಡೂ ತಿಂಗಳಲ್ಲಿ ಬಳಸಿದ ಯುನಿಟ್ ಪ್ರಮಾಣವನ್ನು ಒಂದೇ ಬಿಲ್ ನಲ್ಲಿ ನಮೂಧಿಸಿ ಗರಿಷ್ಟ ಪ್ರಮಾಣಕ್ಕಿಂತ ಹೆಚ್ಚಿನ ಯುನಿಟ್ ಬಳಕೆಗೆ ಈಡು ಮಾಡಲಾಗುವ ಶುಲ್ಕವನ್ನು ಈಡು ಮಾಡುತ್ತಿದೆ.
ಇದರ ವಿರುದ್ಧ ಟ್ವಿಟರ್ ನಲ್ಲಿ ವ್ಯಾಪಕ ಆಕ್ರೊಶ ವ್ಯಕ್ತವಾಗುತ್ತಿದ್ದು, ನಮ್ಮ ಬೆಸ್ಕಾಂ ಪ್ರತಿಕ್ರಿಯೆ ನೀಡಲು ಮುಂದಾಗಿದೆ. ಆದರೆ,ಬಿಲ್ ನಲ್ಲಿ ಯಾವುದೇ ಬದಲಾವಣೆಗೂ ಸಿದ್ಧವಿಲ್ಲದೆ, ಯಾವುದೇ ಪ್ರತಿಕ್ರಿಯೆಗೂ ಮುಂದಾಗದೆ ಮೆಸ್ಕಾಂ ಮೌನ ತಾಳಿದ್ದು, ಗ್ರಾಹಕರನ್ನು ಮತ್ತಷ್ಟು ಕೆರಳಿಸಿದೆ.
ಲಾಕ್ಡೌನ್ ಪೂರ್ವ 2 ತಿಂಗಳ ಬಿಲ್ ಗಿಂತ ನಂತರದ 2 ತಿಂಗಳ ಬಿಲ್ ನಲ್ಲಿ ಮೂರು ಪಟ್ಟು ಹೆಚ್ಚು ಶುಲ್ಕ ನಮೂದಿಸಲಾಗಿದೆ, ಹೊರತಾಗಿ ಇತರ ಬಾಬ್ತಿನಲ್ಲೂ ಶುಲ್ಕ ಹಾಕಲಾಗಿದೆ. ಒಟ್ಟಿನಲ್ಲಿ ಜನಸಾಮಾನ್ಯರ ಕಿಸೆಗೆ ಕತ್ತರಿ ಹಾಕಿ ಹಗಲು ದರೋಡೆಗೆ ಮುಂದಾಗಿರುವ ಮೆಸ್ಕಾಂ ವಿರುದ್ಧ ಕ್ರಮ ಕೈಗೊಂಡು ಕೂಡಲೇ ಪರಿಹಾರ ಕಂಡುಕೊಳ್ಳುವತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.
ಕೋವಿಡ್ ಪರಿಹಾರ ನಿಧಿಯಿಂದ ಜನಸಾಮಾನ್ಯರ ವಿದ್ಯುತ್ ಬಿಲ್ಲನ್ನಾದರೂ ಮನ್ನಾ ಮಾಡಲು ಸರಕಾರ ಮುಂದಾಗಬೇಕಾಗಿ ಸಾಮಾಜಿಕ ತಾಣದಲ್ಲಿ ಗ್ರಾಹಕರು ಮನವಿ ಮಾಡಿಕೊಂಡಿದ್ದಾರೆ.
ವಿದ್ಯುತ್ ಬಿಲ್ ಹೆಚ್ಚಳ, ಟ್ವಿಟರ್ ನಲ್ಲಿ ಟ್ರೆಂಡಿಂಗ್, ಪ್ರತಿಕ್ರಿಯಿಸಿದ ನಮ್ಮ ಬೆಸ್ಕಾಂ