janadhvani

Kannada Online News Paper

ಲಾಕ್‌ಡೌನ್ ಸಮಯದಲ್ಲಿ ಸರ್ವಧರ್ಮೀಯರಿಗೆ ನೆರವಾಗುತ್ತಿರುವ ಸಂಸ್ಥೆ

ಚಿಕ್ಕಮಗಳೂರು:ಇಲ್ಲಿನ ಜಾಮಿಯ ಅರಬಿಯ ಕನ್ಝುಲ್ ಇಮಾನ್ ಸಂಸ್ಥೆಯ ವತಿಯಿಂದ ಪವಿತ್ರ ರಂಜಾನ್ ಪ್ರಯುಕ್ತ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಮಹಮ್ಮದ್ ಶಾಹಿದ್ ರಜ್ಜಿರವರ ನೇತೃತ್ವದಲ್ಲಿ ಮೇ.22ರಂದು ರಂಜಾನ್ ಆಹಾರ ಧಾನ್ಯಗಳ ವಿಶೇಷ ಪ್ಯಾಕೇಜನ್ನು ಸರ್ವಧರ್ಮದ ಬಡವರಿಗೆ , ನಿರ್ಗತಿಕರಿಗೆ , ನಿರಾಶ್ರಿತರಿಗೆ ಹಾಗೂ ಲಾಕ್‌ಡೌನ್ ಹಿನ್ನಲೆಯಲ್ಲಿ ಕಷ್ಟಕ್ಕಿಡಾಗಿರುವ ಮಧ್ಯಮ ವರ್ಗದ ಕುಟುಂಬಗಳಿಗೆ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು .

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಫೈರೋಜ್ ಅಹಮದ್ ರಜ್ಜಿಯವರು ಈ ಹಿಂದೆ ಸಂಸ್ಥೆ ವತಿಯಿಂದ ಲಾಕ್‌ಡೌನ್ ಹಿನ್ನಲೆಯಲ್ಲಿ ಇದುವರೆಗೂ 2000 ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ಉಚಿತ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು . ಮುಂಬರುವ ಮೇ 24 ಅಥವಾ 25 ರಂದು ರಂಜಾನ್ ಈದ್ ಆಚರಿಸುವ ದಿನವಾದ್ದರಿಂದ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಬೇಕೆಂದು ಮನವಿ ಮಾಡಿದರು .

ಹಬ್ಬಕ್ಕೆ ಖರ್ಚಾಗುವ ಬಟ್ಟೆಬರಿ ಇತ್ಯಾದಿಗಳನ್ನು ಖರೀದಿಸುವ ಬದಲು ಅದೇ ಹಣದಲ್ಲಿ ಬಡವರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪೂರೈಸಿ ಅಲ್ಲಾಹನ ಕೃಪೆಗೆ ಪಾತ್ರರಾಗಬೇಕೆಂದು ಮನವರಿಕೆ ಮಾಡಲಾಯಿತು . ಈ ಸಂದರ್ಭದಲ್ಲಿ ಕನ್ಜುಲ್ ಇಮಾನ್ ಟ್ರಸ್ಟಿನ ಟ್ರಸ್ಟಿಗಳಾದ ಔರಂಗ್ ಹುಸೈನ್ , ಶಫಿ, ವಸೀಂ ಅಹಮದ್ ,ಮನ್ಸೂರ್ ಅಹಮದ್ ಮತ್ತು ಫಾರುಕ್ ಅಹಮದ್‌ರವರು ಉಪಸ್ಥಿತರಿದ್ದರು .

error: Content is protected !! Not allowed copy content from janadhvani.com