ಜಾಗತಿಕವಾಗಿ ಜನಸಾಮಾನ್ಯರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನಾವು ಹೊಸ ಬಟ್ಟೆ ಖರೀದಿಸುವುದಿಲ್ಲ, ಜೊತೆಗೆ ಸರಳವಾಗಿ ಈದ್ ಆಚರಿಸುತ್ತೇವೆ ಎಂಬ ಉಲಮಾಗಳ ನಿರ್ಧಾರವು ಟ್ವಿಟರ್ ಖಾತೆಗಳಲ್ಲಿ ವ್ಯಾಪಕವಾಗಿ ಟ್ರೆಂಡಿಂಗ್ ಆಗಿದೆ.
ಪ್ರಪಂಚವೇ ಕೊರೊನಾ ವೈರಸ್ಗೆ ತತ್ತರಿಸಿದೆ. ಬಡವರು, ವಲಸೆ ಕಾರ್ಮಿಕರು ಕಣ್ಣೀರಲ್ಲಿ ಜೀವನ ದೂಡುತ್ತಿದ್ದಾರೆ. ಹಸಿವಿನಿಂದ ಜನರು ನರಳುತ್ತಿದ್ದಾರೆ.
ಈ ವರ್ಷದ ಈದುಲ್ ಫಿತ್ರ್ ಸಂಭ್ರಮ, ಸಡಗರವಿಲ್ಲದೆ ಸರಳವಾಗಿ ಆಚರಿಸೋಣ.
ಸರಕಾರ ಮತ್ತು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಮುನ್ನಡೆಯೋಣ.#NoEidShopping#SimpleEidThisRamadan— Moulana Shafi Saadi (@shafi_saadi) May 19, 2020
ಹಲವಾರು ಮಂದಿ ವಿವಿಧ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ನಾವು ಈದ್ ವಸ್ತ್ರ ಖರೀದಿಸುವ ಮೂಲಕ ಮಾಧ್ಯಮಗಳಿಗೆ ಆಹಾರವಾಗುವುದಿಲ್ಲಾ ಎಂಬ ಸಂದೇಶವು ಗಮನ ಸೆಳೆಯಿತು. ಖಾಝಿಗಳ ಪತ್ರಿಕಾ ಪ್ರಕಟಣೆಗಳು ತಮ್ಮ ಖಾತೆಗಳಲ್ಲಿ ಹಲವರು ಹಂಚಿಕೊಂಡಿದ್ದಾರೆ. #NoEidShopping, #SimpleEidThisRamadan
ಹ್ಯಾಷ್ ಟ್ಯಾಗ್ ನಲ್ಲಿ ಪ್ರಚಾರ ಪಡೆದ ಟ್ವೀಟ್ ಗಳು ಮಾಧ್ಯಮಗಳ ವರದಿಗಳೂ ಟ್ವೀಟ್ ಗೆ ಹಲವರು ಉಪಯೋಗಿಸಿದ್ದು ಕಂಡು ಬಂದಿದೆ.ಸಮಾಜದ ಹಿತದೃಷ್ಟಿಯಿಂದ ನಮ್ಮ ನಿರ್ಧಾರವೆಂದು ಹಲವರು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಈದ್ ಸರಳ ರೀತಿಯಲ್ಲೇ ಆಚರಿಸಲು ಮುಸ್ಲಿಂ ಸಮಾಜ ನಿರ್ಧಾರ ಕೈಗೊಂಡಿದೆ ಎಂಬುದರ ಒಂದು ಸ್ಪಷ್ಟ ಉದಾಹರಣೆಯಾಗಿದೆ ಟ್ವಿಟರ್ ಅಭಿಯಾನ.