janadhvani

Kannada Online News Paper

ಕರಾವಳಿಗರು ಮಂಗಳೂರು,ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮನ – ಯು.ಟಿ ಖಾದರ್

ಮಂಗಳೂರು: ಕೊರೋನ ವೈರಸ್ ನಿಂದ ವಿದೇಶಗಳಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ವಾಪಸ್ ಕರೆತರುವ ಪ್ರಕ್ರಿಯೆಯ ಅಂಗವಾಗಿ ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇ 14 ರಂದು ವಿಮಾನ ಆಗಮಿಸಲಿದೆ.

ಮೇ 12ರಂದು ಕಣ್ಣೂರು ವಿಮಾನ ನಿಲ್ದಾಣ ಮತ್ತು ಮೇ 14ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಭಾರತೀಯರನ್ನು ಕರೆ ತರುವ ವಿಮಾನಗಳು ಆಗಮಿಸಲಿದೆ. ಕರಾವಳಿ ಭಾಗದ ಜವಾಬ್ದಾರಿ ವಹಿಸಿಕೊಂಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಜತೆಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ ಎಂದು ಶಾಸಕ ಯು.ಟಿ ಖಾದರ್‌ ಹೇಳಿದರು.

ಗಲ್ಫ್‌ , ಮಸ್ಕತ್‌, ಕತಾರ್‌, ಸೌದಿ ಅರೆಬಿಯಾ, ಮಧ್ಯ ಪೂರ್ವ ದೇಶಗಳಲ್ಲಿ ಹೆಚ್ಚಿನ ಕರಾವಳಿಗರು ನೆಲೆಸಿದ್ದಾರೆ. ಅವರಲ್ಲಿ ಅಸೌಖ್ಯದಿಂದ ಇರುವ ಹಿರಿಯ ನಾಗರಿಕರು, ಗರ್ಭಿಣಿಯರು, ವೀಸಾ ಮುಗಿದವರು, ಪ್ರವಾಸಕ್ಕೆ ತೆರಳಿದವರು ಇದ್ದಾರೆ. ಅವರನ್ನು ತುರ್ತಾಗಿ ವಾಪಸ್‌ ಕರೆತರಲು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಅವರ ಶ್ರಮದಿಂದ ಮಾ.14ರಂದು ಮಂಗಳೂರು ವಿಮಾನ ನಿಲ್ದಾಣಕ್ಕೂ ವಿಮಾನಗಳು ಬರಲಿವೆ. ಬರುವ ಮಂದಿಯನ್ನು ಎ, ಬಿ, ಸಿ ಕ್ಯಾಟಗರಿಯಡಿ ವಿಂಗಡಿಸಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ ಮತ್ತು ಅಸೌಖ್ಯದಿಂದ ಇರುವವರಿಗೆ ಕೆಲ ಹೊಟೇಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಅವರ ಇಚ್ಛೆಯಂತೆ ಉಳಿದುಕೊಳ್ಳಬಹುದು. ಎನ್‌.ಜಿ.ಒ.ಗಳು ಸಹಕಾರ ನೀಡಲಿದ್ದು, ರಂಝಾನ್‌ ಉಪವಾಸ ಸಂದರ್ಭವೂ ಆಗಿರುವುದರಿಂದ ಜಿಲ್ಲಾಡಳಿತಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ.

ಕಣ್ಣೂರು ವಿಮಾನ ನಿಲ್ದಾಣಕ್ಕೆ ಬರುವ ಕರಾವಳಿಗರಿಗೆ ಜಿಲ್ಲಾಡಳಿತ ಬಸ್‌ ಕಳುಹಿಸಬೇಕಾಗಿದೆ ಎಂದರು. ಒಟ್ಟು 15,000 ವಿದೇಶಿಗರು ಕರ್ನಾಟಕಕ್ಕೆ ಆಗಮಿಸಲಿರುವಾಗ ಜಿಲ್ಲೆಯ 3 ರಿಂದ 4 ಸಾವಿರ ಮಂದಿ ಇರುವ ಸಾಧ್ಯತೆಗಳಿವೆ ಎಂದರು.

ಏರ್ ಇಂಡಿಯಾ ವಿಮಾನವು ಮೇ 14 ರಂದು ಸಂಜೆ 4:10 pm (UAE Time) ಹೋರಾಡಲಿದ್ದು, ಮಂಗಳೂರಿಗೆ ರಾತ್ರಿ 9:10 pm (IST) ಆಗಮಿಸಲಿದೆ ಎಂದು ಏರ್ ಇಂಡಿಯಾ ಮೂಲ ತಿಳಿಸಿದೆ.

error: Content is protected !! Not allowed copy content from janadhvani.com