ಬದುಕು-ಬವಣೆ
ಒಣ ಮರದ ಕೊನೆ ಕೊನೆಯಲಿ ಚಿಗುರೊಡೆದ ಎಳೆ ರೆಂಬೆ
ಸುಡು ಬಿಸಲ ಕಡು ಕೋಪಕೆ ಕರಟಿ ಹೋಯ್ತ ಮುರುಟಿ ಮುರುಟಿ…..
ಧರೆಗೊರಗುವ ನೋವ ನಡುವೆ ವಿಶಾದದ ನಗು, ಏನಿದು ಸತ್ವಹೀನ ಬದುಕು?
ಸುತ್ತಮುತ್ತಲಿನ ಅತ್ಯಂತ ನಿರ್ಗತಿಕ ಮತ್ತು ಬಡವರನ್ನು ಸಹಾಯಮಾಡಲು ಯೋಚಿಸಿದ ಸಮಾನ ಮನಸ್ಕ ಸ್ನೇಹಿತರ ಒಂದು ಸಣ್ಣ ಸಂಘಟನೆಯಾಗಿದೆ ಮಂಗಳೂರು ಚಾರಿಟಿ ಫೋರಂ (ರಿ). 2018 ರಲ್ಲಿ ರಂಜಾನ್ ಕಿಟ್ ವಿತರಿಸುವ ಮೂಲಕ ಸಮಾಜ ಸೇವೆಗೆ ಹೆಜ್ಜೆಯಿಟ್ಟಿದೆ. ಮಂಜೇಶ್ವರ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಇದೀಗಾಗಲೇ ಕಾರ್ಯ ಪ್ರವೃತ್ತವಾಗಿದೆ. ಸದ್ಯ 23 ದಾನಿಗಳಿದ್ದು, ಇವರಿಂದ ಪ್ರತಿ ತಿಂಗಳು ನಿರ್ದಿಷ್ಟ ಧನಸಹಾಯ ಒಟ್ಟುಗೂಡಿಸಿ ಕಳೆದ 2 ವರ್ಷಗಳಿಂದ ಆಯ್ದ ಕೆಲವು ಕುಟುಂಬಗಳಿಗೆ (ಸದ್ಯ 25 ಕುಟುಂಬಗಳು) ( Grocery Kit & Cash) ನೀಡಿ ಅವರ ಕಣ್ಣೀರೊರೆಸಲು ಪ್ರಯತ್ನವನ್ನು ಮಂಗಳೂರು ಚಾರಿಟಿ ಫೋರಂ (ರಿ) ಮಾಡುತ್ತಾ ಬಂದಿದೆ.
ಎಪ್ರೀಲ್ ತಿಂಗಳ ಮೊದಲನೇ ವಾರದಲ್ಲಿ ಕೋವಿಡ್ 19 ಕೊರೋನಾ ಲಾಕ್ ಡೌನ್ ನಿಮಿತ್ತ ನಾಡಿನ ಮುಸ್ಲಿಂ ಹಾಗೂ ಇತರ ಧರ್ಮ ಬಾಂಧವರನ್ನು ಒಳಗೊಂಡು ಸುಮಾರು 50ರಷ್ಟು ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಪೂರೈಸಲಾಯಿತು. ಎಪ್ರಿಲ್ ಕೊನಯ ವಾರದಲ್ಲಿ ಲಾಕ್ಡೌನ್ ಪ್ರಯುಕ್ತ ಸಂಕಷ್ಟದಲ್ಲಿರುವ ಮದ್ಯಮ ವರ್ಗದ ಕುಟುಂಬಗಳನ್ನು ಗಮನದಲ್ಲಿಟ್ಟು ಸುಮಾರು 53 ರಷ್ಟು ಕಿಟ್ ವಿತರಿಸಲಾಯಿತು
ಪ್ರತಿ ತಿಂಗಳು ಹೆಚ್ಚು ಹೆಚ್ಚು ಇಂತಹ ಕುಟುಂಬಗಳನ್ನ ಕಂಡೆತ್ತಿ ಅವರಿಗೆ ಸಹಾಯಹಸ್ತ ಚಾಚಲು ( Grocery Kit & Cash) ನಮ್ಮ ತಂಡ ಕಠಿಣ ಪ್ರಯತ್ನ ಮುಂದುವರಿಸುತ್ತಾ ಇದೆ
ನಿಮಗೂ ಇದರಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅಂಗವಾಗಲು, ಯಾರಿಗಾದರೂ ಮಾಹಿತಿ ಬೇಕಿದ್ದಲ್ಲಿ ಈ ಯೋಜನೆಯನ್ನ ಇನ್ನೂ ಬಲಪಡಿಸಲು ಬಯಸುವವರು ಸಂಪರ್ಕಿಸಿ.
ಈ ಚಾರಿಟೀ ಗ್ರೂಪ್ನೊಂದಿಗೆ ಕೈಜೋಡಿಸಲಿಚ್ಚಿಸುವವರು ಈ ಕೆಳಗಿನ ಅಧಿಕೃತ ನಂಬರನ್ನು ಸಂಪಕಿ೯ಸಿ, ನಮ್ಮ ಗ್ರೂಪ್ನ ಸದಸ್ಯರಾಗಬಹುದು. ತಮಗೆ ಸ್ವತಃ ಕುಟುಂಬಗಳನ್ನು ಸಂಪಕಿ೯ಸಿ ದಾನವನ್ನು ನೀಡಬಹುದು.👇
ಮೋನು ಬೋರ್ಕಳ
+91 99023 30233
ಹಮೀದ್ ಬೋರ್ಕಳ
+91 94477 61654
ಹನೀಫ್ ಸಾಲೆತ್ತೂರು
+91 9844785740