ರಿಯಾದ್: ಸೌದಿಯಲ್ಲಿ ಕೋವಿಡ್ ಶಂಕಿತರ ಆಶ್ರಯಕ್ಕಾಗಿ ಕೈಗಾರಿಕಾ ಸಚಿವಾಲಯವು ಬೃಹತ್ ಕೇಂದ್ರವನ್ನು ಸ್ಥಾಪಿಸಿದೆ. 10,000 ಚದರ ಮೀಟರ್ ಪ್ರದೇಶದ ತಾತ್ಕಾಲಿಕ ಕೇಂದ್ರವು ಪೂರ್ವ ಪ್ರಾಂತ್ಯದ ಎರಡನೇ ಕೈಗಾರಿಕಾ ನಗರದಲ್ಲಿದೆ. ರೋಗಲಕ್ಷಣಗಳನ್ನು ಹೊಂದಿರುವ ಮತ್ತು ರೋಗಿಗಳ ಸಂಪರ್ಕದ ಮೂಲಕ ಅನಾರೋಗ್ಯದ ಸಾಧ್ಯತೆ ಇರುವವರನ್ನು ತಾತ್ಕಾಲಿಕ ಕೇಂದ್ರದಲ್ಲಿ ಇರಿಸಲಾಗುತ್ತದೆ.
ಸೌದಿಯ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯವು ಸೌದಿ ಕೈಗಾರಿಕಾ ಗುಂಪಾದ ಮುದುನ್ ನೇತೃತ್ವದಲ್ಲಿ ತಾತ್ಕಾಲಿಕ ಕೇಂದ್ರವನ್ನು ಸ್ಥಾಪಿಸಿದೆ. ಪ್ರಾಂತೀಯ ಗವರ್ನರ್ ಸೌದ್ ಬಿನ್ ನೈಫ್ ಅವರ ನಿರ್ದೇಶನದಂತೆ ಈ ಕ್ರಮ ಎನ್ನಲಾಗಿದ್ದು, ಆರೋಗ್ಯ ಸಚಿವಾಲಯದ ಸಹಯೋಗದೊಂದಿಗೆ ಕಾರ್ಯಾಚರಿಸಲಿದೆ. ಅನಾರೋಗ್ಯದ ಲಕ್ಷಣಗಳಿರುವ ಮತ್ತು ರೋಗಿಯ ಸಂಪರ್ಕದ ಮೂಲಕ ಹರಡುವ ಸಾಧ್ಯತೆ ಇರುವ ಜನರನ್ನು ವಿಶೇಷ ಕೇಂದ್ರದಲ್ಲಿ ಇರಿಸಲಾಗುವುದು.
ನಂತರ ಪರೀಕ್ಷೆಗಳಿಂದ ಪಾಸಿಟಿವ್ ಕಂಡುಬಂದರೆ ಅಂತವರನ್ನು ಆರೋಗ್ಯ ಸಚಿವಾಲಯದ ಪ್ರತ್ಯೇಕ ಕೇಂದ್ರಗಳಿಗೆ ವರ್ಗಾಯಿಸಲಾಗುವುದು ಮತ್ತು ನೆಗಟೇವ್ ಬಂದಲ್ಲಿ ತಮ್ಮ ಸ್ವಂತ ನಿವಾಸಗಳಿಗೆ ಸ್ಥಳಾಂತರಿಸಲಾಗುವುದು ಎಂದು ಮುದುನ್ ವಕ್ತಾರ ಖುಸೈ ಅಬ್ದುಲ್‌ಕರೀಮ್ ಹೇಳಿದ್ದಾರೆ.
ಮುದುನ್ ನಾಯಕತ್ವದಲ್ಲಿ ಕೈಗಾರಿಕಾ ವಲಯದ ಇನ್ನೂರು ವಸತಿ ಕೇಂದ್ರಗಳ ಪರಿಶೀಲನೆಯನ್ನು ನಾವು ಈಗಾಗಲೇ ಪೂರ್ಣಗೊಳಿಸಿದ್ದು, ಆ ಮೂಲಕ ಇಪ್ಪತ್ತೈದು ಸಾವಿರ ಕೋವಿಡ್ ಪರಿಶೋಧನೆ ನಡೆಸಲಾಗಿದೆ ಎಂದು ಅವರು ಹೇಳಿದರು.