ದೋಹಾ: ಕೊವಿಡ್ ಭೀತಿಯ ಹಿನ್ನೆಲೆಯಲ್ಲಿ ತುರ್ತಾಗಿ ಸ್ವದೇಶಕ್ಕೆ ಮರಳಲು ಬಯಸುವ ಖತರ್‌ನಲ್ಲಿರುವ ಅನಿವಾಸಿ ಭಾರತೀಯರಿಗೆ ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ವಿಶೇಷ ನೋಂದಣಿಯನ್ನು ಪ್ರಾರಂಭಿಸಿದೆ.
ಮಾಹಿತಿಯನ್ನು ಕೆಳಗೆ ಕೊಟ್ಟಿರುವ ಪ್ರತ್ಯೇಕ ಲಿಂಕ್ ಮೂಲಕ ಒದಗಿಸಬೇಕು: https://docs.google.com/forms/d/e/1FAIpQLSftPP5rNta6ZGPih37Os4AqbZnjwCpkIWCbpguTVyRdeADI7w/viewform. ಲಿಂಕ್ ಅನ್ನು ಕ್ಲಿಕ್ ಮಾಡುವಾಗ ತೆರೆದುಕೊಳ್ಳುವ ಪುಟದಲ್ಲಿ ಖತರ್ ಮತ್ತು ಸ್ವದೇಶದ ವಿಳಾಸ, ಖತರ್‌ನಲ್ಲಿ ಮಾಡುವ ಕೆಲಸ ಮತ್ತು ವೀಸಾ ಮಾಹಿತಿ ಹಾಗೂ ತುರ್ತು ನಿರ್ಗಮನದ ಉದ್ದೇಶವನ್ನು ವಿವರಿಸಬೇಕು.
ಕುಟುಂಬ ಸಮೇತವಾಗಿ ಹೋಗಲು ಬಯಸಿದರೆ ಪ್ರತೀಯೊಬ್ಬರು ಪ್ರತ್ಯೇಕವಾಗಿ ಫಾರ್ಮ್ ಅನ್ನು ಭರ್ತಿ ಮಾಡಬೇಕು.
ಅದೇ ಸಮಯದಲ್ಲಿ, ಭಾರತಕ್ಕೆ ವಿಮಾನಯಾನವು ಯಾವಾಗ ಪ್ರಾರಂಭವಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈಗ ಕೇವಲ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.