janadhvani

Kannada Online News Paper

ಸೌದಿ: ಇಶಾ ಅಝಾನನ್ನು ಯಥಾ ಸಮಯದಲ್ಲಿ ಕರೆಯುವಂತೆ ಸೂಚನೆ

ರಿಯಾದ್: ಪವಿತ್ರ ರಮಝಾನ್ ತಿಂಗಳು ಮಸೀದಿಗಳಲ್ಲಿ ರಾತ್ರಿಯ ಇಶಾ ಆಝಾನ್ ಅನ್ನು ಯಥಾ ಸಮಯದಲ್ಲಿ ಕರೆಯಬೇಕೆಂದು ಸೌದಿ ಧಾರ್ಮಿಕ ವ್ಯವಹಾರಗಳ ಸಚಿವ ಡಾ.ಅಬ್ದುಲ್ ಲತೀಫ್ ಅಲ್-ಶೈಖ್ ಸೂಚಿಸಿದ್ದಾರೆ. ವಿವಿಧ ಪ್ರಾಂತ್ಯಗಳಲ್ಲಿನ ಸಚಿವಾಲಯದ ಶಾಖಾ ಕಚೇರಿಗಳ ಮೂಲಕ ದೇಶಾದ್ಯಂತದ ಮಸೀದಿಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ಇಶಾ ಆಝಾನ್ ಅನ್ನು ಪವಿತ್ರ ರಮಝಾನ್ ತಿಂಗಳಲ್ಲಿ ಸಾಮಾನ್ಯ ಸಮಯಕ್ಕಿಂತ 30 ನಿಮಿಷ ತಡವಾಗಿ ಕರೆಯಲಾಗುತ್ತದೆ. ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮಸೀದಿಗಳನ್ನು ಮುಚ್ಚಿದ್ದರಿಂದ ಮನೆಯಲ್ಲಿಯೇ ನಮಾಝ್ ನಿರ್ವಹಿಸಬೇಕು ಎಂದು ಹಿಂದೆ ನೀಡಿದ ಸುತ್ತೋಲೆಗೆ ಪೂರಕವಾಗಿ ಹೊಸ ಪ್ರಸ್ತಾಪ ಬಂದಿದೆ.

ಉಪವಾಸವನ್ನು ತೊರೆದ ನಂತರ, ಇಶಾ ನಮಾಝ್ ಮತ್ತು ತಾರವೀಹ್ ನಮಾಝ್ ಸಮಾಧಾನದೊಂದಿಗೆ ನಿರ್ವಹಿಸಲು ಜನರು ಮಸೀದಿಗೆ ಬರಲು ಅನುಕೂಲವಾಗುವಂತೆ ಇಶಾ ಆಝಾನ್‌ಗೆ 30 ನಿಮಿಷಗಳಷ್ಟು ವಿಳಂಬಗೊಳಿಸಲಾಗುತ್ತಿದ್ದವು.