ದೋಹಾ: ಕೋವಿಡ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಖತರ್ನ ಜೈಲಲ್ಲಿರುವ ವಿವಿಧ ಖೈದಿಗಳಿಗೆ ಅಲ್ಲಿನ ಅಮೀರ್ ಕ್ಷಮಾಪಣೆ ನೀಡಿ ಆದೇಶ ಹೊರಡಿಸಿದ್ದಾರೆ.
ಮಾನವಹಕ್ಕು, ಆರೋಗ್ಯ ಸಮಸ್ಯೆ ಪರಿಗಣಿಸಿ ಕೆಲವರಿಗೆ ಕ್ಷಮಾಪಣೆ ನೀಡಲಾಗಿದೆ ಎಂದು ಖತರ್ನ ನ್ಯೂಸ್ ಏಜೆನ್ಸಿ ವರದಿ ಮಾಡಿರುವುದಾಗಿ ವಿವಿಧ ಪತ್ರಿಕೆಗಳು ತಿಳಿಸಿದೆ.
ಆದರೆ, ಯಾಯ್ಯಾವ ಖೈದಿಗಳಿಗೆ, ಅವರು ಸ್ವದೇಶೀಯರೇ ಅಥವಾ ವಿದೇಶೀಯರೂ ಇದ್ದಾರೆಯೇ ಮುಂತಾದವುಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.






