ದೋಹಾ: ರಮಝಾನ್ ಅವಧಿಯಲ್ಲಿ ಖತರ್‌ನ ಕಾರ್ಮಿಕ ವಲಯದಲ್ಲಿ ಮತ್ತಷ್ಟು ವಿನಾಯಿತಿ ಘೋಷಿಸಲಾಗಿದೆ. ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಅದರಂತೆ ಸರಕಾರಿ ನೌಕರರ ಕೆಲಸದ ಸಮಯವನ್ನು ನಾಲ್ಕು ಗಂಟೆಗೆ ಇಳಿಸಲಾಗಿದೆ. ರಮಝಾನ್ ವೇಳೆಯಲ್ಲಿ ಸರಕಾರಿ ನೌಕರರ ಕೆಲಸದ ಸಮಯ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಆಗಿರುತ್ತದೆ.
ಅದೇ ವೇಳೆ ಖಾಸಗಿ ವಲಯದಲ್ಲಿ, ಕೆಲಸದ ಸಮಯ ಆರು ಗಂಟೆಗಳಾಗಿದ್ದು, ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಕೆಲಸದ ಸಮಯವಾಗಿದೆ. ಆಹಾರ ಮಾರಾಟ ಕೇಂದ್ರಗಳು, ಔಷಧಾಲಯಗಳು ಮತ್ತು ಮನೆಗಳಿಗೆ ವಿತರಣೆ ಮಾಡುವ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವ ನೌಕರರು ಪೂರ್ಣ ಸಮಯ ಕೆಲಸ ಮಾಡಬಹುದು. ಆದರೆ ಉದ್ಯೋಗಿಗಳು ಮುಖವಾಡಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಸೂಚಿಸಲಾಗಿದೆ.