janadhvani

Kannada Online News Paper

ಬಹ್‌ರೈನ್‌ನ ಅಲ್ ಫಾತಿಹ್ ಗ್ರ್ಯಾಂಡ್ ಮಸೀದಿಯನ್ನು ಶುಕ್ರವಾರ ತೆರೆಯಲಾಗುವುದು

ಮನಾಮ: ಜುಮುಆ ಮತ್ತು ರಮಝಾನ್‌ನ ಮಗ್ರಿಬ್, ಇಶಾ, ತರಾವೀಹ್ ನಮಾಝ್ ನಿರ್ವಹಣೆಗಾಗಿ ಬಹ್‌ರೈನ್‌ನ ಅತಿದೊಡ್ಡ ಮಸೀದಿಯಾದ ಅಲ್ ಫಾತಿಹ್ ಗ್ರ್ಯಾಂಡ್ ಮಸೀದಿಯನ್ನು ಶುಕ್ರವಾರ ತೆರೆಯಲಾಗುವುದು.

ಇಮಾಮ್ ಮತ್ತು ಇತರ ಐದು ಜನರು ಮಾತ್ರ ನಮಾಝ್‌ಗೆ ಹಾಜರಾಗುತ್ತಾರೆ. ಕಾನೂನು, ಇಸ್ಲಾಮಿಕ್ ವ್ಯವಹಾರ ಮತ್ತು ವಕ್ಫ್ ಖಾತೆಯ ಸಚಿವಾಲಯ ಇದನ್ನು ಪ್ರಕಟಿಸಿದೆ.

ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಎಲ್ಲಾ ಆರು ಮಂದಿ ಫೇಸ್ ಮಾಸ್ಕ್ ಧರಿಸಬೇಕು. ವಿಶ್ವಾಸಿಗಳಿಗಾಗಿ ಪ್ರಾರ್ಥನೆಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.