janadhvani

Kannada Online News Paper

ಸೌದಿಯಾದ್ಯಂತ ಏಕೀಕೃತ ಪಾಸ್: ಏ.21 ರಿಂದ ಜಾರಿಗೆ

ರಿಯಾದ್: ಕೋವಿಡ್ ಹರಡುವಿಕೆ ಮುಂದುವರಿಯುತ್ತಿರುವ ಕಾರಣ ದೇಶಾದ್ಯಂತ ಏಕೀಕೃತ ಪಾಸ್ ವ್ಯವಸ್ಥೆಯು ಮಂಗಳವಾರ ಮಧ್ಯಾಹ್ನ 3 ರಿಂದ ಜಾರಿಗೆ ಬರಲಿದೆ. ಪ್ರಸಕ್ತ, ರಿಯಾದ್, ಮಕ್ಕಾ ಮತ್ತು ಮದೀನಾದಲ್ಲಿ ಮಾತ್ರ ಗೃಹ ಸಚಿವಾಲಯದ ಮೊಹರು ಇರುವ ವಿಶೇಷ ಪಾಸ್‌ಗಳು ಜಾರಿಯಲ್ಲಿವೆ.

ಇತರ ಪ್ರದೇಶಗಳಲ್ಲಿ ಸಂಬಂಧಪಟ್ಟ ಸಚಿವಾಲಯ ಅಥವಾ ಸಂಸ್ಥೆಗಳ ಮೊಹರು ಮತ್ತು ಚೇಂಬರ್ ಮಾಡಲಾದ ಪಾಸ್ ಜಾರಿಯಲ್ಲಿದೆ. ಇದನ್ನು ಮಂಗಳವಾರದಿಂದ ಸ್ವೀಕರಿಸಲಾಗುವುದಿಲ್ಲ. ಯಾವ ಸಚಿವಾಲಯದ ವ್ಯಾಪ್ತಿಯಲ್ಲಿ ಕೆಲಸಮಾಡಲಾಗುತ್ತದೆಯೋ ಅದೇ ಸಚಿವಾಲಯದ ಮೊಹರು ಮತ್ತು ಗೃಹ ಸಚಿವಾಲಯದ ಮೊಹರು ಇರುವ ಹೊಸ ಪಾಸ್ ನ್ನು ಮಾತ್ರ ಸ್ವೀಕರಿಸಲಾಗುತ್ತದೆ.

ಪಾಸ್ ಇಲ್ಲದೆ ವಾಹನದಲ್ಲಿ ಎಲ್ಲಿಗೆ ಪ್ರಯಾಣಿಸಿದರೂ 10,000 ರಿಯಾಲ್ ದಂಡ ವಿಧಿಸಲಾಗುತ್ತದೆ. ಅಗತ್ಯ ವಸ್ತುಗಳನ್ನು ಹತ್ತಿರದ ಅಂಗಡಿಗಳಿಂದ ಮಾತ್ರ ಖರೀದಿಸಲು ಅವಕಾಶವಿದೆ.