janadhvani

Kannada Online News Paper

ಸೌದಿ: ಕೋವಿಡ್-19- ಸ್ವಯಂಸೇವಕರಾಗಲು ಆಸಕ್ತಿಯುಳ್ಳವರು ನೋಂದಾಯಿಸಿ

ರಿಯಾದ್: ಕೋವಿಡ್ ತಡೆಗಟ್ಟುವಿಕೆ ಕಾರ್ಯಗಳ ಭಾಗವಾಗಲು ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವವರು ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯದ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು.

ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಮತ್ತು ಇತರ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆಯುಳ್ಳವರು, ವಿದ್ಯಾರ್ಥಿಗಳು ಸರ್ಕಾರದ ಕೋವಿಡ್ ರೋಗನಿರೋಧಕ ಪ್ರಯತ್ನಗಳ ಭಾಗವಾಗಬಹುದು. ವಿದೇಶಿಯರು ಮತ್ತು ಸ್ಥಳೀಯರು ಇದರಲ್ಲಿ ಭಾಗವಹಿಸಬಹುದು. ಆರೋಗ್ಯ ವೃತ್ತಿಪರರು, ವೈದ್ಯರು, ದಾದಿಯರು, ವೈದ್ಯಕೀಯೇತರ ವೃತ್ತಿಪರರು, ವಿದ್ಯಾರ್ಥಿಗಳು, ಸಾರ್ವಜನಿಕ ಸಂಪರ್ಕದಲ್ಲಿರುವವರು, ಅಡ್ಮಿನಿಸ್ಟ್ರೇಟ್ ಕೆಲಸ ಮಾಡುವವರು, ವಕೀಲರು, ಅನುವಾದಕರು, ಎಂಜಿನಿಯರ್‌ಗಳು, ಸರಕು ಸಾಗಣೆದಾರರು ಮತ್ತು ಪತ್ರಕರ್ತರು ನೋಂದಾಯಿಸಿ ಕೊಳ್ಳಬಹುದು. ಕಾರ್ಯವಿಧಾನವು ಈ ಕೆಳಗಿನಂತಿದೆ.

1. ಆರೋಗ್ಯ ಸಚಿವಾಲಯದ ಸ್ವಯಂಪ್ರೇರಿತ ನೋಂದಣಿ ಪೋರ್ಟಲ್ ಅನ್ನು ತೆರೆಯಿರಿ. ನೋಂದಣಿ ಲಿಂಕ್: https://volunteer.srca.org.sa/#!/login

2.ನೋಂದಣಿ ಲಿಂಕ್ ಅನ್ನು ತೆರೆದಾಗ, ಮೇಲ್ಭಾಗದಲ್ಲಿ ಅರೇಬಿಕ್ ಅಥವಾ ಇಂಗ್ಲಿಷ್ ಅನ್ನು ಆಯ್ಕೆ ಮಾಡಬಹುದು. ಇದರ ನಂತರ, ವಿದೇಶಿಯರು ಅಭ್ಷೀರ್‌ನ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಮುಖಪುಟದಲ್ಲಿರುವ OR ಅಡಿಯಲ್ಲಿರುವ sign in through NATIONAL INFORMATION CENTER PLATFORM ಲಿಂಕ್ ಅನ್ನು ಕ್ಲಿಕ್ ಮಾಡಿ, ಅಬ್ಶೀರ್ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿದಾಗ ಮೊಬೈಲ್‌ನಲ್ಲಿ OTP ಪಡೆಯುತ್ತೀರಿ. ಇದನ್ನು ನಮೂದಿಸಿದರೆ, ಮುಖ ಪುಟಕ್ಕೆ ಲಾಗ್ ಇನ್ ಮಾಡಲಾಗುತ್ತದೆ.

3. ಮುಖ್ಯ ಪುಟದಲ್ಲಿ, ನಮ್ಮ ಪೂರ್ಣ ಹೆಸರನ್ನು ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆಯಲ್ಲಿ ಪೂರ್ಣಗೊಳಿಸಿ. ನಂತರ, ಪೂರ್ಣ ವಿವರಗಳನ್ನು ಕೆಳಗೆ ಸೇರಿಸಿ. ನಮ್ಮ ಪರಿಣತಿಯ ಕ್ಷೇತ್ರವನ್ನು ನಾವು ಆಯ್ಕೆ ಮಾಡಬಹುದು. ಪಾಸ್ಪೋರ್ಟ್ ಸೈಝ್ ಫೋಟೋದೊಂದಿಗೆ ಹೊಸ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ರಚಿಸಬೇಕು.ಇದರ ಮೂಲಕ ನೀವು ಸೈಟ್‌ಗೆ ಲಾಗ್ ಇನ್ ಮಾಡಬಹುದು.

4. ಮತ್ತೆ ಲಾಗ್ ಇನ್ ಮಾಡಿದಾಗ ನಮ್ಮ ನೋಂದಣಿಯನ್ನು ಪ್ರಾಥಮಿಕವಾಗಿ ಸ್ವೀಕರಿಸಲಾಗಿದೆ ಎಂಬ ಮಾಹಿತಿಯನ್ನು ನಾವು ಸ್ವೀಕರಿಸುತ್ತೇವೆ. ನಮ್ಮ ಅರ್ಜಿಯನ್ನು ಸ್ವೀಕರಿಸಿದ ನಂತರ, ಸಚಿವಾಲಯವು ತರಬೇತಿಯನ್ನು ನೀಡುತ್ತದೆ. ಅಂದಿನಿಂದ ಸಚಿವಾಲಯವು ನಮ್ಮ ಸೇವೆಗಳನ್ನು ವಿವಿಧ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುತ್ತದೆ.

ನಿಮ್ಮ ಹೊಸದಾಗಿ ರಚಿಸಲಾದ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಆಗುವುದರಿಂದ ಎಲ್ಲಾ ಮಾಹಿತಿಯನ್ನು ಪರಿಶೀಲಿಸಲು ಮತ್ತು ಅಗತ್ಯವಿರುವ ಯಾವುದೇ ಬದಲಾವಣೆಗಳನ್ನು ಮಾಡಲು ನಿಮಗೆ ಅನುಮತಿ ಲಭಿಸುತ್ತದೆ. ಅರ್ಜಿಯನ್ನು ಸ್ವೀಕರಿಸಿದರೆ, ಉಳಿದ ವಿವರಗಳನ್ನು ತಿಳಿಸಲಾಗುತ್ತದೆ

ಆರೋಗ್ಯ ಸಚಿವಾಲಯದ ಅಡಿಯಲ್ಲಿನ ಆರೋಗ್ಯ ವೇದಿಕೆಯಲ್ಲಿ ನೋಂದಣಿ ಪೂರ್ಣಗೊಳಿಸುವ ಮೂಲಕ ಸ್ವಯಂಸೇವಕರು ಈ ಕ್ಷೇತ್ರವನ್ನು ಪ್ರವೇಶಿಸುತ್ತಾರೆ. ಈಗಾಗಲೇ 80,000 ಕ್ಕೂ ಹೆಚ್ಚು ಜನರು ಸೇವೆಗೆ ಸೇರಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಅವರ ಸೇವೆಗಳನ್ನು ಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಸಹಾಯ ಮಾಡಲು ಬಳಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com