janadhvani

Kannada Online News Paper

ರೀ ಎಂಟ್ರಿ ವೀಸಾ ಕಾಲಾವಧಿ ವಿಸ್ತರಿಸಲು ದೊರೆ ಸಲ್ಮಾನ್ ಆದೇಶ

ರಿಯಾದ್: ಸೌದಿ ಅರೇಬಿಯಾದಿಂ ಸ್ವದೇಶಕ್ಕೆ ತೆರಳಲು ರೀ ಎಂಟ್ರಿ (ಮರು ಪ್ರವೇಶ)ವೀಸಾ ಪಡೆದಿರುವವರಿಗೆ ಮೂರು ತಿಂಗಳ ಕಾಲಾವಧಿ ವಿಸ್ತರಿಸಿ ನೀಡಬೇಕೆಂದು ದೊರೆ ಸಲ್ಮಾನ್ ಆದೇಶ ನೀಡಿದ್ದಾರೆ.

ವಲಸಿಗರು ಊರಿಗೆ ತೆರಳಿ ಸೌದಿಗೆ ಮರಳುವ ತಾತ್ಕಾಲಿಕ ವೀಸಾ ಆಗಿದೆ ರೀ ಎಂಟ್ರಿ.ಫೆಬ್ರವರಿ 25 ಮತ್ತು ಮೇ 24 ರ ನಡುವಿನ ಎಲ್ಲಾ ಮರು-ಪ್ರವೇಶ ವೀಸಾಗಳನ್ನು ಮೂರು ತಿಂಗಳವರೆಗೆ ಉಚಿತವಾಗಿ ವಿಸ್ತರಿಸಲಾಗುತ್ತದೆ.

ಯಾವುದೇ ಶುಲ್ಕಗಳು ಅಥವಾ ಇತರ ಕಾರ್ಯವಿಧಾನಗಳಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರ ವೀಸಾಗಳನ್ನು ಅಬ್ಶೀರ್ ವಿಸ್ತರಿಸಿ ನೀಡಲಿದೆ.