ದುಬೈ: ಯುಎಇ ಎಕ್ಸ್‌ಚೇಂಜ್ ಮೂಲಕ ಮಾಡಲಾಗುವ ವಹಿವಾಟುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸಂಸ್ಥೆಯ ಅಧಿಕಾರಿಗಳೇ ಈ ಬಗ್ಗೆ ಬಹಿರಂಗಪಡಿಸಿದ್ದು, ಆನ್‌ಲೈನ್ ಪಾವತಿ ಸೇವೆಯನ್ನು ಕೂಡ ನಿಲ್ಲಿಸಲಾಗಿದೆ.ನಾಳೆಯಿಂದ ಯಾವುದೇ ಸೇವೆ ಇರುವುದಿಲ್ಲ ಎಂದು ಯುಎಇ ಎಕ್ಸ್‌ಚೇಂಜ್ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರಿಗೆ ಮಾಹಿತಿ ನೀಡಲು ಶಾಖೆಗಳನ್ನು ತೆರೆಯಲಾಗುತ್ತದೆ ಆದರೆ ಯಾವುದೇ ವ್ಯವಹಾರ ನಡೆಸಲಾಗುವುದಿಲ್ಲ. ಗ್ರಾಹಕ ಸೇವಾ ಕೇಂದ್ರ ಸಹ ತೆರೆಯಲಾಗುತ್ತಿದೆ. ಅನಾನುಕೂಲತೆಗಾಗಿ ನಾವು ಗ್ರಾಹಕರಲ್ಲಿ ಕ್ಷಮೆ ಯಾಚಿಸುತ್ತೇವೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿಯ ಯುಎಇ ಎಕ್ಸ್‌ಚೇಂಜನ್ನು ಮುಚ್ಚುವುದರಿಂದ ಭಾರತೀಯರು ಸೇರಿದಂತೆ ಹಲವು ವಲಸಿಗರು ಬಿಕ್ಕಟ್ಟಿಗೆ ಸಿಲುಕಲಿದ್ದಾರೆ. ಭಾರತಕ್ಕೆ ಹಣ ವ್ಯವಹಾವನ್ನು ನಡೆಸಲು ಯುಎಇ ಎಕ್ಸ್‌ಚೇಂಜ್ ನ್ನು ವಲಸಿಗರು ಹೆಚ್ಚಾಗಿ ಅವಲಂಬಿಸಿದ್ದಾರೆ. ಕೋವಿಡ್ ವೈರಸ್ ಹರಡಿದ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದೆ ಎನ್ನಲಾಗಿದೆ. ಆದಾಗ್ಯೂ, ಯಾವಾಗ ಸೇವೆ ಆರಂಭವಾಗಲಿದೆ ಅಥವಾ ಕಾರಣವೇನು ಎಂಬುದರ ಬಗ್ಗೆ ನಿರ್ದಿಷ್ಟ ವಿವರಗಳನ್ನು ಈ ವರಿಗೆ ನೀಡಲಾಗಿಲ್ಲ.