ರಿಯಾದ್: ಸಂದರ್ಶನ ವಿಸಾದಲ್ಲಿ ಬಂದು, ವಿಮಾನ ಯಾತ್ರೆ ಮೊಟಕುಗೊಂಡ ಕಾರಣ ಮರಳಲು ಸಾಧ್ಯವಾಗದವರಿಗೆ ವೀಸಾ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಪಾಸ್‌ಪೋರ್ಟ್ ಇಲಾಖೆ (ಜವಾಝಾತ್) ತಿಳಿಸಿದೆ. ಸೌದಿ ಗೃಹ ಸಚಿವ ಅಬ್ದುಲ್ ಅಝೀಝ್ ಬಿನ್ ಅಲ್-ಸೌದ್ ಈ ಬಗ್ಗೆ ಆದೇಶಿಸಿದ್ದಾರೆ. ಕುಟುಂಬ ಭೇಟಿ, ಉದ್ಯೋಗ ಭೇಟಿ ಮತ್ತು ಚಿಕಿತ್ಸಾ ಭೇಟಿ ಮುಂತಾದ ಎಲ್ಲಾ ರೀತಿಯ ವಿಸಿಟ್ ವಿಸಾಗಳನ್ನು ನವೀಕರಿಸಲಾಗುವುದು.
ಈ ಸೇವೆ ಗೃಹ ಸಚಿವಾಲಯದ ಆನ್‌ಲೈನ್ ಪೋರ್ಟಲ್, ಅಬ್ಶೀರ್, ಬಿಸಿನೆಸ್ ಅಬ್ಶೀರ್ ಮತ್ತು ಮುಖೀಮ್ ವೆಬ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಒಂದು ವೇಳೆ ಸೇವೆಯನ್ನು ಆನ್‌ಲೈನ್‌ನಲ್ಲಿ ನವೀಕರಿಸಲು ಸಾಧ್ಯವಾಗದಿದ್ದರೆ, ಈ ಸೇವೆಯು ಜವಾಝಾತ್ ಕಚೇರಿಯಿಂದ ಲಭ್ಯವಿರುತ್ತದೆ.
ವೀಸಾ ಅವಧಿ ಮುಗಿಯುತ್ತಾ ಬಂದವರು ಮತ್ತು ಸೌದಿಗೆ ಬಂದು 180 ದಿನಗಳು ಕಳೆದವರು ಆನ್‌ಲೈನ್‌ನಲ್ಲಿ ನವೀಕರಣ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಜವಾಝಾತ್ ವಿನಂತಿಸಿದೆ.ಶುಲ್ಕವನ್ನು ಪಾವತಿಸುವ ಮೂಲಕ ಆನ್‌ಲೈನ್ ಸೇವೆ ಲಭ್ಯವಿದೆ.
ಜಾವಾಝಾತ್ ಮೂಲಕ ನೇರವಾಗಿ ನವೀಕರಿಸುವವರು ಶುಲ್ಕವನ್ನು ಪಾವತಿಸಿ ಬಳಿಕ ಹತ್ತಿರದ ಕಚೇರಿಯನ್ನು ಸಂಪರ್ಕಿಸಬೇಕು. ನಿರ್ದಿಷ್ಟ ಪರಿಸ್ಥಿತಿಯನ್ನು ಪರಿಗಣಿಸಿ, ನವೀಕರಿಸಲು ರಾಷ್ಟ್ರೀಯ ದತ್ತಾಂಶ ಕೇಂದ್ರದ ಸಹಕಾರದೊಂದು ಕಾರ್ಯಾಚರಿಸಲಾಗುತ್ತಿದೆ ಎಂದು ಜವಾಝಾತ್ ಹೇಳಿಕೆ ನೀಡಿದೆ.