ಮಂಗಳೂರು, ಮಾ.15- ವಿಶ್ವಾದ್ಯಂತ ಮಹಾಮಾರಿ ಕೊರೋನಾ ವೈರಸ್ ಗೆ ಜನರು ತತ್ತರಿಸಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ವೃದ್ಧಿಸುತ್ತಲೇ ಇದೆ. ಕೊರೊನಾ ಎಂದ ತಕ್ಷಣ ನಾಗರಿಕರು ಓಡುವ ಪರಿಸ್ಥತಿ ನಿರ್ಮಾಣವಾದರೆ, ಆದರೆ ಕರ್ನಾಟಕದ ಮಂಗಳೂರಿನಲ್ಲಿ ಇದಕ್ಕಿಂತ ಕೊಂಚ ಭಿನ್ನ ಪರಿಸ್ಥಿತಿ ಇದೆ. ಈ ಮಧ್ಯೆ ಕಡಲ ನಗರಿ ಮಂಗಳೂರು ಬಂದರಿನಲ್ಲಿ ಕೊರೊನಾ ಪತ್ತೆಯಾಗಿದೆ. ಆದರೆ ಇದು ಮಹಾಮಾರಿ ಕೋವಿಡ್ 19 ಕೊರೋನಾ ವೈರಸ್ ಅಲ್ಲ, ಬದಲಾಗಿ ಇದು ಕೊರೋನಾ ಹೆಸರಿನ ಮೀನಾಗಿದೆ.
ಕೊರೊನಾ ಬರುವುದೇ ಬೇಡ ಅಂತ ದೇವರಲ್ಲಿ ಮೊರೆ ಇಟ್ಟು ಮುಂಜಾಗ್ರತಾ ಕ್ರಮ ಕೈಗೊಂಡರೆ ಇಲ್ಲಿ ಮಾತ್ರ ಜನ ಕೊರೊನಾ ಬೇಕು ಅಂತಿದ್ದಾರಂತೆ. ಕೊರೊನಾ ಕಡಲಿನಲ್ಲಿ ಸಿಗುವ ಬಲು ಅಪರೂಪದ ಮೀನು ಆಗಿದೆ. ಕೊರೊನಾ ಮೀನಿಗೆ ಕೆ.ಜಿ ಗೆ 1,800 ರಿಂದ 2000 ವರೆಗೆ ಉತ್ತಮ ಬೆಲೆ ಇದೆ. ಕರಾವಳಿ ಜಿಲ್ಲೆಯಲ್ಲಿ ಇದರ ಬೇಡಿಕೆ ಕಡಿಮೆ. ಹೀಗಾಗಿ ಕೊರೊನಾ ಮೀನಿಗೆ ಉತ್ತಮ ಬೇಡಿಕೆ ಇರುವ ಗುಜರಾತ್ ಸೇರಿದಂತೆ ಬೇರೆ ರಾಜ್ಯಗಳಿಗೆ ಇದು ರಫ್ತು ಆಗುತ್ತಿದೆ. ಮತ್ಸ್ಯ ಕ್ಷಾಮದಿಂದ ಕಂಗೆಟ್ಟಿದ್ದ ಮೀನುಗಾರರಿಗೆ ಕೊರೊನಾ ಮೀನು ಸಿಕ್ಕಿದ್ದು ಖುಷಿ ಕೊಟ್ಟಿದೆ. ಇದರ ನಡುವೆ ವೈರಸ್ ಕೊರೊನಾದಿಂದ ಬಂದರಿನಲ್ಲಿ ಕೊರೊನಾ ಮೀನಿನ ಸದ್ದು ಕೂಡ ಜೋರಾಗಿದೆ.