janadhvani

Kannada Online News Paper

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ವಿರುದ್ಧ ಹೋರಾಟಕ್ಕೆ ಕಾಂತಪುರಂ ಉಸ್ತಾದ್ ಕರೆ

ಕಲ್ಲಿಕೋಟೆ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಂತಿಯುತ ಹೋರಾಡುತ್ತಿರುವವರ ಮೇಲೆ ಕ್ರೂರ ಹಿಂಸಾಚಾರವನ್ನು ನಡೆಸಿ, ಅಮಾಯಕರನ್ನು ಪತ್ತೆ ಹಚ್ಚಿ, ಕೊಲೆ, ದೌರ್ಜನ್ಯ ನಡೆಸುತ್ತಾ, ಮಸೀದಿ, ಮನೆ ವ್ಯಾಪಾರ ಕೇಂದ್ರಗಳನ್ನು ಬೆಂಕಿಗಾಹುತಿ ಗೊಳಿಸಿ, ರಾಷ್ಟ್ರದ ರಾಜಧಾನಿಯನ್ನು ಯುದ್ಧ ಭೂಮಿಯನ್ನಾಗಿ ಪರಿವರ್ತಿಸುತ್ತಿರುವ ಸಮಾಜ ಘಾತುಕ, ಕೋಮುವಾದಿ ಫ್ಯಾಸಿಸ್ಟರನ್ನು ಹದ್ದುಬಸ್ತಿನಲ್ಲಿಡಲು ಸರಕಾರ ಮುಂದಾಗಬೇಕೆಂದು ಆಗ್ರಹಿಸುತ್ತಿದ್ದೇನೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಉಸ್ತಾದ್ ಹೇಳಿದ್ದಾರೆ.

ತಮ್ಮ ಫೇಸ್ಬುಕ್ ಖಾತೆಯಮೂಲಕ ದೆಹಲಿಯ ಹಿಂಸಾತ್ಮಕ ಕೃತ್ಯ ವಿರುದ್ಧ ಪ್ರತಿಕ್ರಿಯೆ ನೀಡಿರುವ ಉಸ್ತಾದರು, ಪ್ರತಿಭಟನಾ ಹಕ್ಕನ್ನು ಧಮನಿಸಲು ಸಾಧ್ಯವಿಲ್ಲ, ದೇಶದಲ್ಲಿ ಗಲಭೆ ಸೃಷ್ಟಿಸಿ, ಜನರ ಮಧ್ಯೆ ಕೋಮು ವಿಷಬೀಜವನ್ನು ಬಿತ್ತಲು ಯತ್ನಿಸುತ್ತಿರುವ ಸಂಬಂಧಪಟ್ಟವರು ಅದರಿಂದ ಹಿಂಜರಿಯಬೇಕು ಎಂದಿದ್ದಾರೆ.

ಅಲ್ಪಸಂಖ್ಯಾತರ ಮೇಲಿನ ಯೋಜಿತ ಹಿಂಸಾಚಾರದ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಕರೆ ನೀಡುತ್ತಿದ್ದೇನೆ. ದೇಶದ ಸಮಗ್ರತೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರಜಾಪ್ರಭುತ್ವವಾದಿಗಳು ಜಾಗರೂಕರಾಗುವರು ಎಂದು ಭಾವಿಸುತ್ತಿದ್ದೇನೆ ಎಂದು ಅವರು ಉಲ್ಲೇಖಿಸಿದ್ದಾರೆ.

error: Content is protected !! Not allowed copy content from janadhvani.com