ಕೋಲಾರ: ರಾಹುಲ್ ಬಗ್ಗೆ ಮೋದಿ ಟ್ಯೂಬ್ ಲೈಟ್ ಎಂಬ ವ್ಯಂಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಮೋದಿಯವರು ಸಂಸತ್ತಿನಲ್ಲಿ ಏನು ಉತ್ತರ ಕೊಟ್ಟಿದ್ದಾರೆ. ರೈತರಿಗೆ ದುಪ್ಪಟ್ಟು ಮಾಡ್ತೇನೆ ಅಂದಿದ್ರು. 15 ಲಕ್ಷ ಅಕೌಂಟ್‌ಗೆ ಹಾಕ್ತೇನೆ ಅಂತ ಹೇಳಿದ್ರು. ಇದ್ರ ಬಗ್ಗೆ ಪ್ರಧಾನಿಯವರು ಮಾತನಾಡಲಿ. ಅದು ಬಿಟ್ಟು ರಾಹುಲ್ ಬಗ್ಗೆ ವೈಯುಕ್ತಿಕ ಹೇಳಿಕೆ ಕೊಡೋದು ಸರಿಯಲ್ಲ. ಟ್ಯೂಬ್ ಲೈಟ್ ಚೆನ್ನಾಗಾದರೂ ಬೆಳಗುತ್ತೆ. ಮೋದಿಯವರು ಜಿರೋ ಲೈಟ್ ಇದ್ದಂತೆ. ಅಂದ್ರೆ ಲೈಟ್ ಇರುತ್ತೆ, ಬೆಳಕು ಮಾತ್ರ ಇರಲ್ಲ. ನಾನು ಸಂಸತ್ತಿನಲ್ಲಿ ಭಾಗವಹಿಸಿದ್ರೆ ಇದನ್ನೇ ಹೇಳ್ತಿದ್ದೆ ಎಂದು ಮೋದಿಗೆ ಖರ್ಗೆ ತಿರುಗೇಟು ನೀಡಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಹೈದ್ರಾಬಾದ್ ಕರ್ನಾಟಕವನ್ನ ಸರ್ಕಾರ ಅಭಿವೃದ್ಧಿಪಡಿಸುವ ವಿಚಾರವಾಗಿ ಮಾತನಾಡಿದ್ದು, ಅಸಮಾಧಾನ ಹೊರಹಾಕಿದ್ದಾರೆ.ಹೈದ್ರಬಾದ್ ಕರ್ನಾಟಕಕ್ಕೆ ಕಲ್ಯಾಣ ಅಂತ ಮಾಡಿದ್ದಾರೆ. ನೊಡೋಣ ಅದೆಷ್ಟು ಕಲ್ಯಾಣ ಮಾಡ್ತಾರೆ ಅಂತ. ಹಣ ಬಿಡುಗಡೆಯನ್ನೇ ಮಾಡೋದಿಲ್ಲ. ಇನ್ನ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹೇಗೆ ಸಾಧ್ಯ..? ಕೆಲವರು ಕೇಳುತ್ತಿದ್ದಂತೆ ಹಣವನ್ನ ಬಿಡುಗಡೆ ಮಾಡ್ತಾರೆ. ಕೆಲವರು ಅನುದಾನ ಕೇಳಿದ್ರೂ ಸರ್ಕಾರ ನೀಡ್ತಿಲ್ಲ. ಎಲ್ಲವೂ ಸಿಎಂ ಅಪ್ರೂವಲ್ ಆಗಬೇಕು. ಇನ್ನು ಬಜೆಟ್ ಯಾಕೆ ಮಾಡ್ತೀರಾ..? ಎಂದು ಆಕ್ರೋಶ ಹೊರಹಾಕಿದ್ದಾರೆ.