ಬೀಜಿಂಗ್: ಕೊರೋನಾ ವ್ಯಾಪಕವಾಗಿ ಹಬ್ಬುವುದನ್ನು ತಡೆಯಲು 20000 ರೋಗಿಗಳನ್ನು ಕೊಲ್ಲಲು ಚೀನಾ ಸರ್ಕಾರ ಯೋಜಿಸಿದೆ ಎಂದು ವರದಿಗಳು ತಿಳಿಸಿವೆ. ಸೋಂಕು ತಗುಲಿದ ರೋಗಿಗಳನ್ನು ಹತ್ಯೆ ಮಾಡಲು ಚೀನಾ ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಆದರೆ, ಈ ಸುದ್ದಿಯನ್ನು ಚೀನಾ ಹಾಗೂ ಇತರೆ ಯಾವುದೇ ಪ್ರಮುಖ ವಾಹಿನಿಗಳು ಪ್ರಸಾರ ಮಾಡಿಲ್ಲ.
ಈ ನಡುವೆ ಕೊರೋನಾ ವೈರಸ್ ಸೋಂಕು ಭಾರೀ ಪ್ರಮಾಣದಲ್ಲಿ ಹಬ್ಬುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, ಯಾವುದೇ ವ್ಯಕ್ತಿ ತನಗೆ ಸೋಂಕು ತಗುಲಿರುವ ಮಾಹಿತಿಯನ್ನು ಮುಚ್ಚಿಟ್ಟರೆ, ಉದ್ದೇಶ ಪೂರ್ವಕವಾಗಿ ತಮ್ಮ ಕಾಯಿಲೆಯನ್ನು ಮುಚ್ಚಿಟ್ಟು ಸಾರ್ವಜನಿಕ ಸ್ಥಳಗಳಿಗೆ ಬಂದು, ಇತರರಿಗೆ ಹಬ್ಬಿಸಲು ಯತ್ನಿಸಿದರೆ ಅಂತಹವರ ವಿರುದ್ಧ ಮರಣದಂಡನೆ ಸೇರಿದಂತೆ ಇನ್ನಿತರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.