janadhvani

Kannada Online News Paper

ನೂತನ ಎಸ್ ವೈ ಎಸ್ ರಾಜ್ಯಾಧ್ಯಕ್ಷರಿಗೆ ಮದೀನ ಮುನವ್ವರದಲ್ಲಿ ಸನ್ಮಾನ

ಮದೀನಾ ಮುನವ್ವರ,ಫೆ.01:ಇತ್ತೀಚೆಗೆ ಎಸ್ ವೈ ಎಸ್ ರಾಜ್ಯ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಹು ಉಸ್ಮಾನ್ ಸ’ಅದಿ ಪಟ್ಟೊರಿ ಯವರಿಗೆ ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ವತಿಯಿಂದ ಜ.31ರಂದು ಕೆ.ಸಿ.ಎಫ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಸ್ಮರಣೆಕೆ ನೀಡಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಉಸ್ತಾದರು ಎಸ್ ವೈ ಎಸ್ ರಾಜ್ಯ ಸಮಿತಿಯ ಪ್ರಾರಂಭಿಕ ದಿನಗಳಿಂದ ‌ರಾಜ್ಯಸಮಿತಿಯ ಅಧ್ಯಕ್ಷರಾಗುವರೆಗಿನ ಸಂಘಟನೆಯ ಕಾರ್ಯವೈಖರಿಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷರಾದ ಅಶ್ರಫ್ ಸಖಾಫಿ ನೂಜಿ , ಸೆಕ್ಟರ್ ನಾಯಕರಾದ‌ ಅಶ್ರಫ್ ಹಾಜಿ ಕಿನ್ಯ, ರಝ್ಝಾಖ್ ಹಾಜಿ ಬೈತಡ್ಕ ಸುಲೈಮಾನ್ ಮಿತ್ತೇರಿಪಾದೆ,ಮುಹಮ್ಮದ್ ಅಲೀ ಪಾಣೆಮಂಗಳೂರು,ಇಸ್ಮಾಯಿಲ್ ಉಳ್ಳಾಲ, ಸುಲೈಮಾನ್ ತುರ್ಕಳಿಕೆ ಹಾಗೂ ಮತ್ತಿತರರು ಉಪಸ್ಥಿತಿ ಇದ್ದರು.